varthabharthiರಾಷ್ಟ್ರೀಯ

ಸೀತಾರಾಮ ಯೆಚೂರಿ

ಶ್ರೀಮಂತರ ಸಾಲಮನ್ನಾ ಮಾಡಿ ಬ್ಯಾಂಕ್ ಗಳನ್ನು ನಾಶಗೊಳಿಸುತ್ತಿರುವ ಆರೆಸ್ಸೆಸ್/ಬಿಜೆಪಿ ಸರಕಾರ

ವಾರ್ತಾ ಭಾರತಿ : 21 Oct, 2019

ಹೊಸದಿಲ್ಲಿ,ಅ.21: ಪಿಎಂಸಿ ಬ್ಯಾಂಕ್ ಠೇವಣಿದಾರರು ಅತ್ಯಂತ ಹತಾಶ ಸ್ಥಿತಿಯಲ್ಲಿದ್ದರೂ ಸರಕಾರವು ಅವರ ಬವಣೆಯ ಬಗ್ಗೆ ಕಾಳಜಿಯನ್ನು ಹೊಂದಿಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಸೋಮವಾರ ಆರೋಪಿಸಿದ್ದಾರೆ.

ಈವರೆಗೆ ನಾಲ್ವರು ಠೇವಣಿದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಆರೆಸ್ಸೆಸ್/ಬಿಜೆಪಿ ಸರಕಾರವು ಶ್ರೀಮಂತರ ಸುಸ್ತಿಸಾಲಗಳನ್ನು ಮನ್ನಾ ಮಾಡುವಾಗ ಮತ್ತು ಅತಿ ಶ್ರೀಮಂತರಿಗೆ ತೆರಿಗೆ ರಿಯಾಯಿತಿ ಕೊಡುಗೆಗಳನ್ನು ನೀಡುವಾಗ ಬ್ಯಾಂಕ್‌ಗಳನ್ನು ನಾಶಗೊಳಿಸುತ್ತದೆ ಮತ್ತು ಇದು ಸಾಮಾನ್ಯರ ಮೇಲೆ ನಿಜವಾದ ಪರಿಣಾಮಗಳನ್ನು ಬೀರುತ್ತದೆ. ದುರಂತದ ಇನ್ನೊಂದು ಉದಾಹರಣೆ: ಕೆಲವು ಪಿಎಂಸಿ ಠೇವಣಿದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,ಇತರರು ಅತ್ಯಂತ ಹತಾಶ ಸ್ಥಿತಿಯಲ್ಲಿದ್ದಾರೆ. ಆರೆಸ್ಸೆಸ್/ಬಿಜೆಪಿ ಸರಕಾರವು ಅವರತ್ತ ಗಮನವನ್ನೇ ಹರಿಸುತ್ತಿಲ್ಲ ’ ಎಂದು ಯೆಚೂರಿ ಟ್ವೀಟಿಸಿದ್ದಾರೆ.

ಆರ್ಥಿಕ ಸ್ಥಿತಿಯ ಬಗ್ಗೆ ಸರಕಾರವು ಸುಳ್ಳು ಹೇಳುತ್ತಿದೆ ಮತ್ತು ತೆರಿಗೆದಾರರ ಹಣವನ್ನು ತನ್ನ ಸಾರ್ವಜನಿಕ ಸಂಪರ್ಕಗಳಿಗೆ, ತಮಾಷಾಗಳಿಗೆ ಮತ್ತು ಸ್ವಯಂ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)