ಮೊಬೈಲ್ ಕಳವು ಆರೋಪಿಗಳ ಬಂಧನ: 2.25 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ
ಬೆಂಗಳೂರು, ಅ.21: ಮದ್ಯ ಸೇವನೆಗಾಗಿ ಮೊಬೈಲ್ ಕಳವು ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿರುವ ಇಲ್ಲಿನ ಬಸವನಗುಡಿ ಠಾಣಾ ಪೊಲೀಸರು, 2.25 ಲಕ್ಷ ರೂ. ಮೌಲ್ಯದ 15 ಮೊಬೈಲ್ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಸಿ ರಸ್ತೆಯ ರಾಮಣ್ಣ ಗಾರ್ಡನ್ನ ನವೀನ್ ಜೋಸೆಫ್ ಹಾಗೂ ಸಿದ್ದಯ್ಯ ರಸ್ತೆಯ ವಿನೋಬಾ ನಗರದ ಶಿವಪ್ರಸಾದ್ ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ. ಆರೋಪಿಗಳ ಬಂಧನದಿಂದ ಹನುಮಂತನಗರದ ಪೊಲೀಸ್ ಠಾಣೆ ಸೇರಿ ಒಟ್ಟು ನಾಲ್ಕು ಠಾಣೆಗಳಲ್ಲಿನ ದೂರುಗಳು ಪತ್ತೆಯಾಗಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story