ಹಣೆಬರಹ ಅತ್ಯಾಚಾರದಂತೆ, ವಿರೋಧಿಸಲು ಸಾಧ್ಯವಾಗದೇ ಇದ್ದರೆ, ಆನಂದಿಸಿ: ಕೇರಳ ಸಂಸದನ ಪತ್ನಿಯ ವಿವಾದಾತ್ಮಕ ಹೇಳಿಕೆ
ತಿರುವನಂತಪುರ, ಅ. 22: ಕೇರಳದ ಸಂಸದ ಹಿಬಿ ಈಡನ್ ಅವರ ಪತ್ನಿ ಅನ್ನಾ ಲಿಂಡಾ ಈಡನ್ ಫೇಸ್ಬುಕ್ನಲ್ಲಿ ಹಣೆಬರೆಹವನ್ನು ಆತ್ಯಾಚಾರಕ್ಕೆ ಹೋಲಿಸಿ ಪೋಸ್ಟ್ ಹಾಕುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ.
ಈ ಪೋಸ್ಟ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅನ್ನಾ ಲಿಂಡಾ ಈಡನ್ ಈ ಪೋಸ್ಟ್ ಅನ್ನು ತನ್ನ ಪೇಸ್ ಬುಕ್ ಖಾತೆಯಿಂದ ಮಂಗಳವಾರ ಅಳಿಸಿದ್ದಾರೆ. ‘‘ಹಣೆಬರಹ ಅತ್ಯಾಚಾರದಂತೆ, ಒಂದು ವೇಳೆ ನಿಮಗೆ ವಿರೋಧಿಸಲು ಸಾಧ್ಯವಾಗದೇ ಇದ್ದರೆ, ಅದನ್ನು ಆನಂದಿಸಲು ಯತ್ನಿಸಿ’’ ಎಂದು ಫೇಸ್ಬುಕ್ ಖಾತೆಯಲ್ಲಿ ಅವರು ಪೋಸ್ಟ್ ಮಾಡಿದ್ದರು. ಇದರೊಂದಿಗೆ ಅಲ್ಪಾವಧಿಯ ಎರಡು ವೀಡಿಯೊಗಳನ್ನು ಲಗತ್ತಿಸಿದ್ದರು.
ಆ ವೀಡಿಯೊಂದಲ್ಲಿ ಕೊಚ್ಚಿಯಲ್ಲಿ ಮಂಗಳವಾರ ಭಾರೀ ಮಳೆ ಸುರಿದ ಪರಿಣಾಮ ಜಲಾವೃತವಾದ ಪ್ರದೇಶದಿಂದ ಮಗುವೊಂದನ್ನು ರಕ್ಷಿಸುವ ದೃಶ್ಯವಿದೆ. ಇನ್ನೊಂದರಲ್ಲಿ ಹಿಬಿ ಸಿಜ್ಲರ್ (ಒಂದು ರೀತಿಯ ತಿಂಡಿ) ಅನ್ನು ಆನಂದಿಸುವ ದೃಶ್ಯವಿದೆ.
Next Story