ನಮ್ಮ ಮೆಟ್ರೋಗೆ ಎಂಟು ವರ್ಷ: ಈವರೆಗಿನ ಪ್ರಯಾಣಿಕರ ಸಂಖ್ಯೆ ಎಷ್ಟು ಕೋಟಿ ಗೊತ್ತಾ ?
ಬೆಂಗಳೂರು, ಅ.23: ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸುವ ಸಲುವಾಗಿ ಜಾರಿಗೊಳಿಸಿದ ನಮ್ಮ ಮೆಟ್ರೋ ಮೊದಲ ಹಂತದ ಮೊದಲ ಮಾರ್ಗ ಉದ್ಘಾಟನೆಗೊಂಡು ಎಂಟು ವರ್ಷ ಪೂರೈಸುತ್ತಿದ್ದು, ಈವರೆಗೆ 41.51 ಕೋಟಿ ಜನರು ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾರೆ.
ದಕ್ಷಿಣ ಭಾರತದ ಮೊದಲ ಸುರಂಗ ಮಾರ್ಗ ಹೊಂದಿದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ನಮ್ಮ ಮೆಟ್ರೋ ಅ.20 ರಂದು ಎಂಟು ವರ್ಷ ಪೂರೈಸಿದೆ. ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ 6.7 ಕಿ.ಮೀ. ಉದ್ದದ ಮಾರ್ಗವನ್ನು 2011 ಅ.20 ರಂದು ಉದ್ಘಾಟಿಸಲಾಗಿತ್ತು.
ಕಳೆದ ರವಿವಾರಕ್ಕೆ 8 ವರ್ಷ ಪೂರೈಸಿದ ನಮ್ಮ ಮೆಟ್ರೋ ಸದ್ಯ 42.30 ಕಿ.ಮೀ.ಉದ್ದದ ಮಾರ್ಗವನ್ನು ಹೊಂದಿದೆ. ಈ ವರ್ಷದಲ್ಲಿ ಅ.4 ರಂದು 4.64 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ಒಂದೇ ದಿನದಲ್ಲಿ ಅತಿಹೆಚ್ಚು ಜನರು ಪ್ರಯಾಣಿಸಿದ ದಾಖಲೆಯಾಗಿದೆ.
Next Story