varthabharthi


ನಿಧನ

ಎಚ್.ಬಿ.ಉಸ್ಮಾನ್ ಬೆರ್ನಹಿತ್ಲು

ವಾರ್ತಾ ಭಾರತಿ : 30 Oct, 2019

ಪಡುಬಿದ್ರೆ, ಅ.30: ಹಿರಿಯ ಸಾಮಾಜಿಕ ಮುತ್ಸದ್ದಿ, ಸಮುದಾಯದ ಹಿರಿಯ ನಾಯಕ ಹೆಜಮಾಡಿ ಎಸ್.ಎಸ್. ರೋಡ್ ನಿವಾಸಿ ಎಚ್.ಬಿ.ಉಸ್ಮಾನ್ ಹಾಜಿ ಬೆರ್ನಹಿತ್ಲು(75)  ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಬೆಳಗ್ಗೆ ನಿಧನ ಹೊಂದಿದರು.

ಕೊಯಾಲಿ ಆ್ಯಂಡ್ ಕಂಪೆನಿಯ ಪಾಲುದಾರರಾಗಿದ್ದ ಉಸ್ಮಾನ್ ಹಾಜಿ ಕನ್ನಂಗಾರ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ರಾಜಕೀಯವಾಗಿ ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ಇಂದು(ಬುಧವಾರ) ಅಪರಾಹ್ನ 2 ಗಂಟೆಗೆ ಕನ್ನಂಗಾರ್ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)