varthabharthi

ಗಲ್ಫ್ ಸುದ್ದಿ

ಜಿದ್ದಾದಲ್ಲಿ ಅಲ್ ಖಾದಿಸದಿಂದ ಮೊಹಬ್ಬತೇ‌ ಮುಸ್ತಫ(ಸ.) ಕಾರ್ಯಕ್ರಮ

ವಾರ್ತಾ ಭಾರತಿ : 31 Oct, 2019

ಜಿದ್ದಾ, ಅ.31: ಅಲ್ ಖಾದಿಸ ಎಜುಕೇಶನ್ ಅಕಾಡಮಿ ಇದರ ಜಿದ್ದಾ ಸಮಿತಿಯ ವತಿಯಿಂದ ಮೊಹಬ್ಬತೇ‌ ಮುಸ್ತಫಾ ಸ್ವಲ್ಲಲ್ಲಾಹುಅಲೈಹಿವಸಲ್ಲಂ ಕಾರ್ಯಕ್ರಮ ಇತ್ತೀಚೆಗೆ ಜಿದ್ದಾದಲ್ಲಿರುವ ಶರಫಿಯ್ಯದ ಸ್ನಾಕ್ ರೆಸ್ಟೋರೆಂಟ್ ನಲ್ಲಿ ನಡೆಯಿತು.

ಉಮರ್ ಕಾಮಿಲ್ ಸಖಾಫಿ ಪರಪ್ಪು ಕಾರ್ಯಕ್ರಮ ಉದ್ಘಾಟಿಸಿದರು. ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ದುಆ ನೆರವೇರಿಸಿದರು. ಸಮಿತಿಯ ಉಪಾಧ್ಯಕ್ಷ ಹೈದರ್ ಮುಸ್ಲಿಯಾರ್ ಜೋಗಿಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

ಅಲ್ ಖಾದಿಸ ಸೌದಿ ಅರೇಬಿಯಾ ಸಂಚಾಲಕ ಸಿದ್ದೀಖ್ ನಿಝಾಮಿ ಸಿದ್ಧಕಟ್ಟೆ ಸಂಸ್ಥೆಯ ಕುರಿತು ಪರಿಚಯ ಮಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಮುಖ್ಯ ಭಾಷಣ ಮಾಡಿದರು. ಶಂಸುದ್ದೀನ್ ಮಡಂತ್ಯಾರು ಸ್ವಾಗತಿಸಿದರು. ಜಾಫರ್ ಸಖಾಫಿ ಕರಾಯ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)