varthabharthi


ಗಲ್ಫ್ ಸುದ್ದಿ

ಅಬುಧಾಬಿ: ಮಲಬಾರ್ ಗೋಲ್ಡ್&ಡೈಮಂಡ್ಸ್ ಇಂಟರ್ ನ್ಯಾಷನಲ್ ನ ನೂತನ ಶೋರೂಮ್, ಕಚೇರಿ ಉದ್ಘಾಟನೆ

ವಾರ್ತಾ ಭಾರತಿ : 31 Oct, 2019

ಅಬುಧಾಬಿ, ಅ.31: ಮಲಬಾರ್ ಗೋಲ್ಡ್ & ಡೈಮಂಡ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯು ಅಬುಧಾಬಿಯ ಹಮದಾನ್ ಸ್ಟ್ರೀಟ್ ನಲ್ಲಿ ಸುಸಜ್ಜಿತ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ತನ್ನ ಶೋರೂಮ್ ಮತ್ತು ಕಚೇರಿಯನ್ನು ಆರಂಭಿಸಿತು.

ಮಲಬಾರ್ ಗೋಲ್ಡ್ & ಡೈಮಂಡ್ಸ್ ಇಂಟರ್ ನ್ಯಾಷನಲ್ ಇದರ ವೈಸ್ ಚೇರ್ಮನ್ ಡಾ.ಪಿ.ಎ.ಇಬ್ರಾಹಿಂ ಹಾಜಿ ಶೋ ರೂಮ್ ಮತ್ತು ಕಚೇರಿಯನ್ನು ಉದ್ಘಾಟಿಸಿದರು. ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಮ್ ಇದರ ಅಧ್ಯಕ್ಷ ಮಹಮ್ಮದ್ ಅಲಿ ಉಚ್ಚಿಲ್ ಶುಭ ಹಾರೈಸಿದರು.

ಸಮಾರಂಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಇಂಟರ್ ನ್ಯಾಷನಲ್ ಇದರ ಚೇರ್ಮನ್ ಅಹ್ಮದ್ ಹಾಜಿ, ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಶ್ಯಾಮಲಾಲ್ ಅಹ್ಮದ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)