varthabharthi


ಗಲ್ಫ್ ಸುದ್ದಿ

ಜಿದ್ದಾ: ದಾರುಲ್ ಇರ್ಷಾದ್ ವತಿಯಿಂದ ಇಷ್ಕೇ ರಸೂಲ್ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್

ವಾರ್ತಾ ಭಾರತಿ : 2 Nov, 2019

ಜಿದ್ದಾ, ನ. 2: ದಾರುಲ್ ಇರ್ಷಾದ್ ಮಾಣಿ ಜಿದ್ದಾ ಕಮಿಟಿ ಇದರ ಆಶ್ರಯದಲ್ಲಿ ಇಷ್ಕೇ ರಸೂಲ್ (ಸ.ಅ) ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ಜಿದ್ದಾದ ಕೆಸಿಎಫ್ ಭವನದಲ್ಲಿ ನಡೆಯಿತು.

ಸ್ವಲಾತ್ ಮಜ್ಲಿಸ್ ಗೆ ಉಮರ್ ಸಖಾಫಿ ಪರಪ್ಪು ಉಸ್ತಾದರು ನೇತೃತ್ವ ನೀಡಿದರು. ಪ್ರಾರ್ಥನೆಯನ್ನು ಸಯ್ಯಿದ್ ಝಕರಿಯ್ಯ ಸಖಾಫಿ ನಾವುಂದ ರವರು ನೆರವೇರಿಸಿಕೊಟ್ಟರು.

ನಂತರ ಉಮ್ಮರ್ ಸಖಾಫಿ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು, ಪ್ರವಾದಿಯ ಅನುಯಾಯಿಗಳಾಗಿ, ಭಯ ಭಕ್ತಿಯೊಂದಿಗೆ ನಬಿಯವರ ಚರ್ಯೆಯನ್ನು ಪಾಲಿಸಿ ಜೀವಿಸಬೇಕು. ನವೆಂಬರ್ ಮೂರರಂದು ಕೆ.ಜಿ.ಎನ್ ಮಿತ್ತೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ನೂತನ ನವೀಕೃತ ಮಸ್ಜಿದ್ ಬದ್ರ್ ನ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್, ಅಬ್ದುಲ್ ಹಮೀದ್ ಫೈಝಿ ಉಸ್ತಾದ್, ಇಕ್ಬಾಲ್ ಹಾಜಿ ಉಳ್ಳಾಲ, ಕೆಸಿಎಫ್ ನೇತಾರರು, ಇತರ ಸುನ್ನೀ ಸಂಘ ಸಂಸ್ಥೆಗಳ ನೇತಾರರು, ಉಮರಾಗಳು ಸೇರಿದಂತೆ ಹಲವಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)