varthabharthi


ಸಿನಿಮಾ

5 ದಿನಗಳಲ್ಲಿ 200 ಕೋಟಿ ರೂ. ಬಾಚಿದ ಬಿಗಿಲ್

ವಾರ್ತಾ ಭಾರತಿ : 3 Nov, 2019

ವಿಜಯ್ ಅಭಿನಯದ ಬಿಗಿಲ್, ಬಿಡುಗಡೆಗೆ ಮುನ್ನವೇ ತಮಿಳು ಚಿತ್ರರಂಗದಲ್ಲಿ ಹವಾ ಸೃಷ್ಟಿಸಿದ ಚಿತ್ರ. ಕಳೆದ ವಾರ ತೆರೆಕಂಡ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. ಕೇವಲ 5 ದಿನಗಳಲ್ಲಿ 200 ಕೋಟಿ ರೂ. ಗಳಿಸಿರುವ ಈ ಚಿತ್ರ ತಮಿಳು ಚಿತ್ರರಂಗದ ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಗೈಯುತ್ತಾ ಸಾಗುತ್ತಿದೆ.

ತೇರಿ ಹಾಗೂ ಮೆರ್ಸಲ್ ಬಳಿಕ ಆಟ್ಲಿ ನಿರ್ದೇಶನದ ಚಿತ್ರದಲ್ಲಿ ವಿಜಯ್ ಅಭಿನಯಿಸಿರುವ ಮೂರನೇ ಚಿತ್ರ ಇದಾಗಿದೆ. ಈ ನಟ-ನಿರ್ದೇಶಕ ಜೋಡಿಯ ಹಿಂದಿನ ಚಿತ್ರಗಳಾದ ತೇರಿ ಹಾಗೂ ಮೆರ್ಸಲ್ ಕೂಡಾ ಭರ್ಜರಿ ಯಶಸ್ಸನ್ನು ಕಂಡಿದ್ದವು. ಎಜಿಎಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಬಿಗಿಲ್, ವಿಶ್ವಾದ್ಯಂತದ 4 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ.

ಬಿಗಿಲ್‌ನಲ್ಲಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಕದಿರ್, ಯೋಗಿ ಬಾಬು ಹಾಗೂ ವಿವೇಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಮಧ್ಯೆ ಬಿಗಿಲ್ ಚಿತ್ರದ ಯಶಸ್ಸಿನಿಂದ ಪ್ರೇರಿತರಾಗಿರುವ ಆಟ್ಲಿ, ಸದ್ಯದಲ್ಲೇ ಬಾಲಿವುಡ್‌ಗೆ ಪದಾರ್ಪಣೆಗೈಯುವ ಸುಳಿವು ಕೂಡಾ ನೀಡಿದ್ದಾರೆ. ಶಾರುಕ್ ಖಾನ್ ಅಭಿನಯದ ಚಿತ್ರವನ್ನು ನಿರ್ದೇಶಿಸುವ ಸಾಧ್ಯತೆಯನ್ನು ಅವರು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

ಆದರೆ ಸದ್ಯಕ್ಕೆ ಅವರು ತೆಲುಗು ಚಿತ್ರರಂಗಕ್ಕೆ ಚೊಚ್ಚಲ ಪ್ರವೇಶ ಮಾಡಲಿದ್ದಾರೆ. ಜೂನಿಯರ್ ಎನ್‌ಟಿಆರ್ ನಾಯಕನಾಗಿರುವ ಚಿತ್ರಕ್ಕೆ ಆಟ್ಲಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)