ಆ್ಯಶ್ಲೆ ಬಾರ್ಟಿಗೆ ಶೆಂಝೆನ್ ಕಿರೀಟ
ಶೆಂಝೆನ್ , ನ.3: ವಿಶ್ವದ ನಂ.1 ಟೆನಿಸ್ ತಾರೆ ಆಸ್ಟ್ರೇಲಿಯದ ಆ್ಯಶ್ಲೆ ಬಾರ್ಟಿ ಇಲ್ಲಿ ನಡೆದ ಶೆಂಝೆನ್ ಡಬ್ಲುಟಿಎ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಎಲಿನಾ ಸ್ವಿಟೋಲಿನಾ ವಿರುದ್ಧ 6-4, 6-3 ಅಂತರದಲ್ಲಿ ಜಯ ದಾಖಲಿಸುವ ಮೂಲಕ ಟೆನಿಸ್ ಇತಿಹಾಸದಲ್ಲಿ ದೊಡ್ಡ ಮೊತ್ತದ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ.
ಬಾರ್ಟಿ ಅವರು ಸ್ವಿಟೋಲಿನಾ ವಿರುದ್ಧ ಇದೇ ಮೊದಲ ಬಾರಿ ಜಯ ಗಳಿಸಿದ್ದಾರೆ. ಹಿಂದೆ ಐದು ಬಾರಿ ನಡೆದ ಮುಖಾಮುಖಿಯಲ್ಲಿ ಬಾರ್ಟಿ ಸೋಲು ಅನುಭವಿಸಿದ್ದರು. ಆದರೆ ಆರನೇ ಪ್ರಯತ್ನ ಫಲ ನೀಡಿತು.
ಶೆಂಝೆನ್ ಸ್ಫೋರ್ಟ್ಸ್ ಬೇ ಸೆಂಟರ್ನಲ್ಲಿ 1 ಗಂಟೆ ಮತ್ತು 26 ನಿಮಿಷಗಳ ಕಾಲ ನಡೆದ ಮುಖಾಮುಖಿಯಲ್ಲಿ ಬಾರ್ಟಿ ಜಯ ಗಳಿಸುವಲ್ಲಿ ಯಶಸ್ವಿಯಾದರು.
Next Story