varthabharthi


ಗಲ್ಫ್ ಸುದ್ದಿ

ದುಬೈ : ಕರ್ನಾಟಕ ಎನ್.ಆರ್.ಐ ಫೋರಂ ವತಿಯಿಂದ ಅಣ್ಣಾಮಲೈಗೆ ಸನ್ಮಾನ

ವಾರ್ತಾ ಭಾರತಿ : 4 Nov, 2019

ದುಬೈ: ಯುಎಇ ಭೇಟಿಯಲ್ಲಿರುವ ಮಾಜಿ ಡಿಸಿಪಿ ಅಣ್ಣಾಮಲೈ ಅವರನ್ನು ಕರ್ನಾಟಕ ಎನ್ ಆರ್ ಐ ಫೋರಂ ಯುಎಇ ವತಿಯಿಂದ ದುಬೈ ಫಾರ್ಚ್ಯೂನ್ ಪ್ಲಾಝಾ ಹೋಟೆಲಿನ ಬಾಂಕ್ಯೂಟ್ ಹಾಲ್ ನಲ್ಲಿ  ಸನ್ಮಾನಿಸಲಾಯಿತು.

ಯುಎಇಯಲ್ಲಿರುವ ಕರ್ನಾಟಕ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸೇರಿ ಸುಮಾರು 250ಕ್ಕೂ ಮಿಕ್ಕಿದ ಕನ್ನಡಿಗರು ಭಾಗವಹಿಸಿದ್ದರು. ಪ್ರವೀಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಪ್ರಭಾಕರ ಅಂಬಾಳ್ತಾರೆ ಸ್ವಾಗತಿಸಿದರು.

ಸರ್ವೋತಮ ಶೆಟ್ಟಿ , ಎಂ.ಈ. ಮೂಳೂರ್ , ಮುಹಮ್ಮದ್ ಅಲಿ ಉಚ್ಚಿಲ್, ಡಾ. ಕಾಪ್ ಮುಹಮ್ಮದ್ , ಲತೀಫ್ ಮುಲ್ಕಿ, ಗಣೇಶ್ ರೈ, ಸಾಧನ್ ದಾಸ್ , ಅಲ್ತಾಫ್ ಫರಂಗಿಪೇಟೆ, ಇಮ್ರಾನ್ ಖಾನ್, ದಯಾ ಕಿರೋಡಿಯನ್ , ದೀಪಕ್ , ಹರೀಶ್ ಶೆಟ್ಟಿಗಾರ್ , ಅಕ್ರಮ್ ಭಾಯ್, ನೋಯೆಲ್ , ಮಲ್ಲಿಕಾರ್ಜುನ್ ಗೌಡ, ಅನ್ಸರ್ ಬಾರಕೂರ್ ,ಮೋಹನ್ , ರಝಾಕ್  (ದೀವ), ಇರ್ಷಾದ್ ಮತ್ತು ಇತರರು ಅಣ್ಣಾಮಲೈ ಅವರನ್ನು ಸನ್ಮಾನಿಸಿದರು.

ಶಶಿಧರ ನಾಗಪ್ಪ ಅವರ ಪ್ರಾಯೋಜಕತ್ವದಲ್ಲಿ ನಡೆಯುವ ಕನ್ನಡ ಪಾಠಶಾಲೆಯನ್ನು ಅಣ್ಣಾಮಲೈ ಸಾಂಕೇತಿಕವಾಗಿ ಉದ್ಘಾಟಿಸಿದರು. ಶಶಿಧರ್ ನಾಗಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)