varthabharthi


ಗಲ್ಫ್ ಸುದ್ದಿ

ದುಬೈ ಸಮೀಪ ಕಾರು ಹರಿದು ಭಾರತೀಯ ಬಾಲಕಿ ಮೃತ್ಯು

ವಾರ್ತಾ ಭಾರತಿ : 5 Nov, 2019

ದುಬೈ, ನ. 5: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಶಾಲೆಯೊಂದರ ಹೊರಗೆ ಕಾರೊಂದು ಹರಿದು ನಾಲ್ಕು ವರ್ಷದ ಭಾರತೀಯ ಹೆಣ್ಣು ಮಗು ಮೃತಪಟ್ಟಿದೆ ಮತ್ತು ಅದರ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ದುಬೈಯಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಜೆಬೆಲ್ ಅಲಿ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ಯ ಈ ಘಟನೆ ಸಂಭವಿಸಿದೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಅಪಘಾತ ನಡೆಸಿದ ಕಾರಿನ ಆಫ್ರಿಕ ಮೂಲದ ಚಾಲಕಿಯು ಕಾರನ್ನು ಹಿಂದಕ್ಕೆ ಚಲಾಯಿಸುತ್ತಿದ್ದಾಗ ಕಾಲನ್ನು ಬ್ರೇಕ್‌ನ ಬದಲಿಗೆ ಆ್ಯಕ್ಸಲೇಟರ್ ಮೇಲೆ ಇಟ್ಟಾಗ ಅಪಘಾತ ಸಂಭವಿಸಿದೆ ಎಂದು ಜೆಬೆಲ್ ಅಲಿ ಪೊಲೀಸ್ ಠಾಣೆಯ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಆದಿಲ್ ಅಲ್ ಸುವೈದಿ ತಿಳಿಸಿದರು.

ಮಗು ಮತ್ತು ತಾಯಿ ಚಲಿಸುತ್ತಿರುವ ಕಾರು ಮತ್ತು ನಿಂತಿರುವ ಕಾರಿನ ನಡುವೆ ಸಿಕ್ಕಿ ಅಪ್ಪಚ್ಚಿಯಾದರು. ಬಾಲಕಿಯು ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)