varthabharthi


ಕ್ರೀಡೆ

ಡಿ.19ರಂದು ಕೋಲ್ಕತಾದಲ್ಲಿ ಐಪಿಎಲ್‌ಗೆ ಆಟಗಾರರ ಹರಾಜು

ವಾರ್ತಾ ಭಾರತಿ : 6 Nov, 2019

ಕೋಲ್ಕತಾ, ನ.5: ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಗೆ ಆಟಗಾರರ ಹರಾಜು ಡಿಸೆಂಬರ್ 19 ರಂದು ಕೋಲ್ಕತಾದಲ್ಲಿ ನಡೆಯಲಿದೆ.

 ಮಂಗಳವಾರ ಮುಂಬೈನಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

   ಐಪಿಎಲ್ ಟೂರ್ನಮೆಂಟ್ ಸಾಮಾನ್ಯವಾಗಿ ಪ್ರತಿ ವರ್ಷ ಎಪ್ರಿಲ್-ಮೇ ತಿಂಗಳಲ್ಲಿ ನಡೆಯುತ್ತದೆ ಮತ್ತು ಆಟಗಾರರ ಹರಾಜನ್ನು ಕೋಲ್ಕತಾದಲ್ಲಿ ಮೊದಲ ಬಾರಿಗೆ ಈ ವರ್ಷ ನಡೆಸಲಾಗುತ್ತಿದೆ. ಈ ನಗರವು ಶಾರುಕ್ ಖಾನ್ ಮಾಲಕತ್ವದ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ತಂಡದ ತವರೂರು.

ಐಪಿಎಲ್ 2019ಕ್ಕೆ ಫ್ರಾಂಚೈಸಿ ತಂಡಗಳಿಗೆ ತಲಾ 82 ಕೋಟಿ ರೂ. ನೀಡಲಾಗಿತ್ತು. 2020 ರ ಆವೃತ್ತಿಯಲ್ಲಿ ಪ್ರತಿ ತಂಡಕ್ಕೆ 85 ಕೋಟಿ ರೂ. ನಿಗದಿಪಡಿಸಲಾಗಿದೆ. ಪ್ರತಿ ಫ್ರಾಂಚೈಸಿಗಳು ಕಳೆದ ಹರಾಜಿನಿಂದ ಉಳಿದ ಮೂರು ಕೋಟಿ ರೂ. ಸೇರಿಸಬಹುದಾಗಿದೆ. ದಿಲ್ಲಿ ಕ್ಯಾಪಿಟಲ್ಸ್ ಗರಿಷ್ಠ 8.2 ಕೋಟಿ ರೂ., ರಾಜಸ್ಥಾನ್ ರಾಯಲ್ಸ್ 7.15 ಕೋಟಿ ರೂ. ಮತ್ತು ಕೋಲ್ಕತಾ ನೈಟ್ ರೈಡರ್ಸ್ ಬಳಿ 6.05 ಕೋಟಿ ರೂ. ಉಳಿಕೆ ಇದೆ. ಐಪಿಎಲ್ 2020 ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿ ಬಳಿ ಉಳಿದಿರುವ ಹಣ ಚೆನ್ನೈ ಸೂಪರ್ ಕಿಂಗ್ಸ್ - 3.2 ಕೋಟಿ ರೂ., ದಿಲ್ಲಿ ಕ್ಯಾಪಿಟಲ್ಸ್ - 8.2 ಕೋಟಿ ರೂ., ಕಿಂಗ್ಸ್ ಇಲೆವೆನ್ ಪಂಜಾಬ್ - 3.7 ಕೋಟಿ ರೂ., ಕೋಲ್ಕತಾ ನೈಟ್ ರೈಡರ್ಸ್ - 6.05 ಕೋಟಿ ರೂ. ಮುಂಬೈ ಇಂಡಿಯನ್ಸ್ - 3.55 ಕೋಟಿ ರೂ., ರಾಜಸ್ಥಾನ್ ರಾಯಲ್ಸ್ - 7.15 ಕೋಟಿ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು - 1.80 ಕೋಟಿ ರೂ. ಸನ್ ರೈಸರ್ಸ್ ಹೈದರಾಬಾದ್ - 5.30 ಕೋಟಿ ರೂ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)