varthabharthi


ಅಂತಾರಾಷ್ಟ್ರೀಯ

ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಬದ್ಧತೆ ದೃಢಪಡಿಸಿದ ಮ್ಯಾಕ್ರೋನ್, ಜಿನ್‌ಪಿಂಗ್

ವಾರ್ತಾ ಭಾರತಿ : 6 Nov, 2019

ಬೀಜಿಂಗ್, ನ. 6: ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಬುಧವಾರ ಘೋಷಿಸಿದ್ದಾರೆ. ಒಪ್ಪಂದದಿಂದ ಅಮೆರಿಕ ಈ ವಾರ ಔಪಚಾರಿಕವಾಗಿ ಹಿಂದೆ ಸರಿದ ಬಳಿಕ ಅವರು ಈ ಬದ್ಧತೆ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುವುದನ್ನು ನಿಷೇಧಿಸುವ ಒಪ್ಪಂದವೊಂದಕ್ಕೆ ಫ್ರಾನ್ಸ್ ಮತ್ತು ಚೀನಾ ಅಧ್ಯಕ್ಷರು ಸಹಿ ಹಾಕಲಿದ್ದಾರೆ. ಒಪ್ಪಂದದಿಂದ ಹಿಂದೆ ಸರಿಯಲು ಅರ್ಜಿ ಸಲ್ಲಿಸಿದ್ದೇನೆ ಎಂದು ಅಮೆರಿಕ ಹೇಳಿದ ಬಳಿಕ, ಒಪ್ಪಂದದಿಂದ ಹಿಂದೆ ಸರಿಯುವುದನ್ನು ನಿಷೇಧಿಸುವ ಒಪ್ಪಂದವನ್ನು ರೂಪಿಸಲಾಗಿದೆ.

ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಮಾತುಕತೆ ನಡೆಸಿದ ಬಳಿಕ ಜಂಟಿ ಹೇಳಿಕೆಯೊಂದನ್ನು ಹೊರಡಿಸಿದ ಕ್ಸಿ ಮತ್ತು ಮ್ಯಾಕ್ರೋನ್, ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ತಮ್ಮ ದೃಢ ಬೆಂಬಲವನ್ನು ವ್ಯಕ್ತಪಡಿಸಿದರು. ಈ ಒಪ್ಪಂದವು ವಾಪಸ್ ಬರಲು ಸಾಧ್ಯವಾಗದ ಪ್ರಕ್ರಿಯೆಯಾಗಿದ್ದು, ಹವಾಮಾನ ಕುರಿತು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವ ವೇದಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

‘‘ಇತರರು ಮಾಡಿರುವ ಆಯ್ಕೆಗಳ ಬಗ್ಗೆ ವಿಷಾದಿಸುತ್ತೇನೆ’’ ಎಂದು ಅಮೆರಿಕವನ್ನು ನೇರವಾಗಿ ಹೆಸರಿಸದೆ ಮ್ಯಾಕ್ರೋನ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)