varthabharthi


ಕ್ರೀಡೆ

ಇಂದು 100ನೇ ಟ್ವೆಂಟಿ-20 ಪಂದ್ಯವನ್ನಾಡಲಿರುವ ರೋಹಿತ್

ವಾರ್ತಾ ಭಾರತಿ : 7 Nov, 2019

ರಾಜ್‌ಕೋಟ್, ನ.6: ಹಂಗಾಮಿ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಗುರುವಾರ ನಡೆಯಲಿರುವ ಎರಡನೇ ಪಂದ್ಯವನ್ನು ಆಡಲು ಮೈದಾನಕ್ಕೆ ಇಳಿಯುವ ಮೂಲಕ 100ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಲಿರುವ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಪಾಕಿಸ್ತಾನ ಶುಐಬ್ ಮಲಿಕ್(111 ಪಂದ್ಯಗಳು)100ಕ್ಕೂ ಅಧಿಕ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಿಶ್ವದ ಏಕೈಕ ಆಟಗಾರನಾಗಿದ್ದಾರೆ.

  ರೋಹಿತ್ 2,452 ರನ್ ಗಳಿಸುವ ಮೂಲಕ ಗರಿಷ್ಠ ಟ್ವೆಂಟಿ-20 ರನ್ ಸ್ಕೋರರ್‌ಗಳ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ(2,450 ರನ್)ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ 136.67ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದು, ಇದರಲ್ಲಿ ನಾಲ್ಕು ಶತಕ ಹಾಗೂ 17 ಅರ್ಧಶತಕಗಳಿವೆ. ‘‘2007ರಲ್ಲಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ಆಡಿದ ಬಳಿಕ ದೀರ್ಘ ಪ್ರಯಾಣ ನಡೆಸಿದ್ದೇನೆ. ಮುಖ್ಯವಾಗಿ ಟ್ವೆಂಟಿ-20 ಮಾದರಿಯ ಕ್ರಿಕೆಟ್‌ನಲ್ಲಿ ಕಳೆದ 12 ವರ್ಷಗಳಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೇನೆ. ಹಲವು ಪಾಠಗಳನ್ನು ಕಲಿತು ಮುನ್ನಡೆದಿದ್ದೇನೆ’’ ಎಂದು 100ನೇ ಪಂದ್ಯದ ಮೈಲುಗಲ್ಲು ತಲುಪಿರುವ ಕುರಿತು ಕೇಳಿದ ಪ್ರಶ್ನೆಗೆ ರೋಹಿತ್ ಪ್ರತಿಕ್ರಿಯಿಸಿದರು.

50 ಸಿಕ್ಸರ್ ದಾಖಲೆಯತ್ತ ರಿಯಾದ್ ಬಾಂಗ್ಲಾದೇಶದ ನಾಯಕ ಮಹ್ಮೂದುಲ್ಲಾ ರಿಯಾದ್ ರಾಷ್ಟ್ರೀಯ ದಾಖಲೆ ನಿರ್ಮಿಸಲು ಎದುರು ನೋಡುತ್ತಿದ್ದಾರೆ. ರಿಯಾದ್ ಇನ್ನೆರಡು ಸಿಕ್ಸರ್‌ಗಳನ್ನು ಸಿಡಿಸಿದರೆ ಟಿ-20 ಮಾದರಿ ಕ್ರಿಕೆಟ್‌ನಲ್ಲಿ 50 ಸಿಕ್ಸರ್‌ಗಳನ್ನು ಪೂರೈಸಿದ ಬಾಂಗ್ಲಾದೇಶದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಳ್ಳಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)