varthabharthi

ಗಲ್ಫ್ ಸುದ್ದಿ

ದುಬೈ: ನ.8ರಂದು ಡಿಕೆಎಸ್ ಸಿ 20ನೆ ವಾರ್ಷಿಕೋತ್ಸವ, ಮೀಲಾದುನ್ನಬಿ ಸಮಾರಂಭ

ವಾರ್ತಾ ಭಾರತಿ : 7 Nov, 2019

ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ ವತಿಯಿಂದ ಮೀಲಾದುನ್ನಬಿ ಕಾರ್ಯಕ್ರಮ ಮತ್ತು ಡಿಕೆಎಸ್ ಸಿ ಯುಎಇ ಇದರ 20ನೆ ವಾರ್ಷಿಕ ಸಮಾರಂಭವು ನ.8ರಂದು ಸಂಜೆ 6ಕ್ಕೆ ದುಬೈಯ ಪರ್ಲ್ ಸಿಟಿ ಹೋಟೆಲ್ ನಲ್ಲಿ ನಡೆಯಲಿದೆ.

ದೇಶ, ವಿದೇಶಗಳಿಂದ ಹಲವಾರು ಗಣ್ಯ ಅತಿಥಿಗಳು, ಸೌದಿ ಅರೇಬಿಯಾ, ಒಮನ್, ಬಹರೈನ್ ಮೊದಲಾದ ಕೊಲ್ಲಿ ರಾಷ್ಟ್ರಗಳಿಂದ ಹಲವಾರು  ಡಿಕೆಎಸ್ ಸಿ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಡಿಕೆಎಸ್ ಸಿಯ ಮರ್ಕಝ್ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಅಸ್ಸೈಯದ್ ಕೆಎಸ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಹಲವಾರು ಉಲಮಾ, ಉಮರಾಗಳು ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಪ್ರಖ್ಯಾತ ಬುರ್ದಾ ತಂಡದವರಿಂದ ಬುರ್ದಾ ಬೈಥ್, ಉಲಮಾ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ಹುಬ್ಬುರ್ರಸೂಲ್ ಪ್ರವಚನ ನಡೆಯಲಿದೆ.

ಸಂಜೆ 6ಕ್ಕೆ ಕಾರ್ಯಕ್ರಮವು ಪ್ರಾರಂಭವಾಗಿ ಸುಮಾರು 10ಗಂಟೆಗೆ ಮುಕ್ತಯವಾಗಲಿದ್ದು, ರಾತ್ರಿಯ ಭೋಜನದ ವ್ಯವಸ್ಥೆ ಮಾಡಲಾಗಿದೆ ಹಾಗು ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಸ್ವಾಗತ ಸಮಿತಿಯ ಚಯರ್ಮನ್,  ಡಿಕೆಎಸ್ ಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)