varthabharthi


ರಾಷ್ಟ್ರೀಯ

​ಪೋಷಕರಿಗೆ ದೂರು ನೀಡಿದ್ದಕ್ಕಾಗಿ ವಿದ್ಯಾರ್ಥಿಯಿಂದ ವಾರ್ಡನ್ ಹತ್ಯೆ

ವಾರ್ತಾ ಭಾರತಿ : 7 Nov, 2019

ಚೆನ್ನೈ : ವಿದ್ಯಾರ್ಥಿ ಕಾಲೇಜಿಗೆ ಗೈರುಹಾಜರಾದ ಬಗ್ಗೆ ಪೋಷಕರಿಗೆ ದೂರು ನೀಡಿದ ಕಾರಣಕ್ಕಾಗಿ, ಕುಪಿತ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ವಾರ್ಡನ್‌ನನ್ನು ಇರಿದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹೊಟ್ಟೆ ಮತ್ತು ಕುತ್ತಿಗೆಗೆ ತೀವ್ರ ಇರಿತದ ಗಾಯಗಳಾಗಿದ್ದ ಜಿ. ವೆಂಕಟರಮಣ (45) ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ.

ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ವಿದ್ಯಾರ್ಥಿ ಕಾಲೇಜು ತರಗತಿಗಳಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಅಂತೆಯೇ ಅಧಿಕಾರಿಗಳಿಗೆ ಮಾಹಿತಿ ನೀಡದೆ ಹಾಸ್ಟೆಲ್‌ಗೆ ಕೂಡಾ ನಾಲ್ಕು ದಿನ ಬಂದಿರಲಿಲ್ಲ. ಈ ಬಗ್ಗೆ ವಾರ್ಡನ್ ಪೋಷಕರಿಗೆ ದೂರು ನೀಡಿದರು. ಪೋಷಕರು ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕುಪಿತನಾದ ವಿದ್ಯಾರ್ಥಿ ವಾರ್ಡನ್ ಜತೆ ಜಗಳ ತೆಗೆದು ಇರಿದು ಸಾಯಿಸಿದ ಎಂದು ಪೊಲೀಸರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)