varthabharthi


ರಾಷ್ಟ್ರೀಯ

'ಮಹಾರಾಷ್ಟ್ರದ ಸಿಎಂ ಯಾರು' ಎನ್ನುವ ಪ್ರಶ್ನೆಗೆ ನಿತಿನ್ ಗಡ್ಕರಿ ಉತ್ತರಿಸಿದ್ದು ಹೀಗೆ..

ವಾರ್ತಾ ಭಾರತಿ : 7 Nov, 2019

PTI

ಹೊಸದಿಲ್ಲಿ, ನ.7: ರಾಜ್ಯ ಸರಕಾರದ ಭಾಗವಾಗಿ ತಾನು ಮಹಾರಾಷ್ಟ್ರಕ್ಕೆ ಮರಳುತ್ತೇನೆ ಎನ್ನುವ ಸುದ್ದಿಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ನಿರಾಕರಿಸಿದ್ದಾರೆ.

"ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರಕಾರ ನಡೆಸಲಿದೆ. ನಾನು ದಿಲ್ಲಿ ರಾಜಕಾರಣದಲ್ಲಿದ್ದು ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ವಾಪಸಾಗುವುದಿಲ್ಲ. ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಸರಕಾರ ರಚನೆಯಾಗಲಿದೆ" ಎಂದವರು ಹೇಳಿದರು.

ಇದಕ್ಕೂ ಮೊದಲು ಫಡ್ನವೀಸ್ ಬದಲಾಗಿ ಮಹಾರಾಷ್ಟ್ರದ ಸಿಎಂ ಸ್ಥಾನವನ್ನು ನಿತಿನ್ ಗಡ್ಕರಿ ಅಲಂಕರಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಗಡ್ಕರಿ ಬಗ್ಗೆ ಶಿವಸೇನೆ ಒಳ್ಳೆಯ ಅಭಿಪ್ರಾಯ ಹೊಂದಿದ್ದು, ಅವರು ಸಿಎಂ ಆದರೆ ಶಿವಸೇನೆ ತನ್ನ ನಿರ್ಧಾರ ಸಡಿಲಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಆದರೆ ಇದೀಗ ಗಡ್ಕರಿಯವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ದೇವೇಂದ್ರ ಫಡ್ನವೀಸ್ ಅವರೇ 2ನೆ ಅವಧಿಗೆ ಮಹಾರಾಷ್ಟ್ರ ಸಿಎಂ ಆಗಲಿದ್ದಾರೆ ಎಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)