varthabharthi


ರಾಷ್ಟ್ರೀಯ

ಭಾರತೀಯರಿಗೆ ಎಚ್1-ಬಿ ವೀಸಾ ನಿರಾಕರಣೆ ಹೆಚ್ಚಳ: ಮೋದಿ ವಿರುದ್ಧ ಪ್ರಿಯಾಂಕಾ ಕಿಡಿ

ವಾರ್ತಾ ಭಾರತಿ : 7 Nov, 2019

ಹೊಸದಿಲ್ಲಿ, ನ.7: ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಅಮೆರಿಕಾ ಎಚ್1-ಬಿ ವೀಸಾಗಳನ್ನು ನಿರಾಕರಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕಿಡಿ ಕಾರಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಿಯಾಂಕಾ, "ಅವರ ಆಡಳಿತದಲ್ಲಿ ಯಾರಿಗೆ ಸಹಾಯವಾಗುತ್ತಿದೆ ಎಂದು ಎಲ್ಲರೂ ಬಿಜೆಪಿ ಸರಕಾರವನ್ನು ಕೇಳಬೇಕು. ಪ್ರಧಾನಿ ಅಮೆರಿಕಾಗೆ ತಮ್ಮದೇ `ಹೌಡಿ ಮೋದಿ' ಕಾರ್ಯಕ್ರಮಕ್ಕೆ ತೆರಳಿದರು, ಆದರೆ ಅಮೆರಿಕಾ ಅಲ್ಲಿ ಉದ್ಯೋಗ ನಡೆಸಲು ಬಯಸುವ ಭಾರತೀಯರಿಗೆ ಎಚ್1-ಬಿ ವೀಸಾ ನಿರಾಕರಿಸುತ್ತಿರುವುದು ಹೆಚ್ಚಾಗುತ್ತಿದೆ'' ಎಂದು ಬರೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)