varthabharthiಕರ್ನಾಟಕ

ದಾವಣಗೆರೆ: ಜೆಸಿಬಿಗೆ ರೈಲು ಢಿಕ್ಕಿ

ವಾರ್ತಾ ಭಾರತಿ : 7 Nov, 2019

ದಾವಣಗೆರೆ: ಇಲ್ಲಿನ ಡಿಸಿಎಂ ಟೌನ್‍ಶೀಪ್ ಬಳಿ ಬೆಂಗಳೂರು ಕಡೆಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಗೂಡ್ಸ್ ರೈಲು ಜೆಸಿಬಿಗೆ ಢಿಕ್ಕಿ ಹೊಡೆದಿರುವ ಘಟನೆ ಗುರುವಾರ ನಡೆದಿದೆ. ರೈಲು ಚಾಲಕರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. 

ಪಕ್ಕದಲ್ಲಿರುವ ಹಳಿ ದುರಸ್ಥಿ ಕಾಮಗಾರಿ ವೇಳೆ ರೈಲು ಬರುವ ವೇಳೆಗೆ ಜೆಸಿಬಿ ಅಡ್ಡವಾಗಿ ಬಂದಿದೆ. ಈ ವೇಳೆ ರೈಲು ಬರುವುದು ಕಂಡು ಜೆಸಿಬಿ ಬಿಟ್ಟು ಚಾಲಕ ಹೊರ ಜಿಗಿದ್ದಾನೆ.  ಘಟನೆ ಪರಣಾಮ ಜೆಸಿಬಿ ಸಂಪೂರ್ಣ ನಜ್ಜು ಗುಜ್ಜಾಗಿದೆ. ರೈಲ್ವೆ ಇಲಾಖೆ ಸಿಬ್ಬಂದಿ ಮಾರ್ಗ ತೆರವು ಕಾರ್ಯಾಚರಣೆ ನಡೆಸಿದರು. ಕೆಲ ಹೊತ್ತು ರೈಲು ಸಂಚಾರ ಸ್ಥಗಿತಗೊಂಡಿತ್ತು.  

ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)