varthabharthi


ಅಂತಾರಾಷ್ಟ್ರೀಯ

ನವಾಝ್ ಶರೀಫ್ ಆಸ್ಪತ್ರೆಯಿಂದ ಬಿಡುಗಡೆ

ವಾರ್ತಾ ಭಾರತಿ : 7 Nov, 2019

ಲಾಹೋರ್, ನ. 7: ಎರಡು ವಾರಗಳ ಆಸ್ಪತ್ರೆ ವಾಸದ ಬಳಿಕ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಇಲ್ಲಿನ ತನ್ನ ನಿವಾಸದಲ್ಲಿ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ.

69 ವರ್ಷದ ಶರೀಫ್‌ರ ರಕ್ತದ ಪ್ಲೇಟ್‌ಲೆಟ್ ಕಣಗಳ ಸಂಖ್ಯೆ 2,000ಕ್ಕೆ ಇಳಿದಾಗ ಅವರನ್ನು ಅಕ್ಟೋಬರ್ 21ರಂದು ಜೈಲಿನಿಂದ ಲಾಹೋರ್‌ನ ಸರ್ವಿಸಸ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಮಗಳು ಮರ್ಯಮ್ ನವಾಝ್ ಕೂಡ ಆಸ್ಪತ್ರೆಯಿಂದ ಬಿಡುಗಡೆಗೊಂಡು ಅದೇ ಮನೆಗೆ ಹೋಗಿದ್ದಾರೆ.

ಇಸ್ಲಾಮಾಬಾದ್ ಹೈಕೋರ್ಟ್ ಕಳೆದ ವಾರ, ಅಲ್-ಅಝೀಝಾ ಸ್ಟೀಲ್ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಶರೀಫ್‌ಗೆ 8 ವಾರಗಳ ಜಾಮೀನು ನೀಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)