varthabharthi


ರಾಷ್ಟ್ರೀಯ

ಕೌನ್ ಬನೇಗಾ ಕರೋಡ್‍ಪತಿ ನಿಷೇಧಿಸಲು ಆಗ್ರಹ : ಕಾರಣವೇನು ಗೊತ್ತೇ ?

ವಾರ್ತಾ ಭಾರತಿ : 8 Nov, 2019

ಹೊಸದಿಲ್ಲಿ : ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ನಿರೂಪಕರಾಗಿರುವ ಜನಪ್ರಿಯ ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ನೀಡಲಾದ ನಾಲ್ಕು ಆಯ್ಕೆಗಳಲ್ಲಿ ಕೊನೆಯ ಆಯ್ಕೆಯಾಗಿದ್ದ  ಶಿವಾಜಿಯ ಹೆಸರಿನ ಜತೆ ಛತ್ರಪತಿ ಸೇರಿಸದೇ ಇರುವ ಬಗ್ಗೆ ಟ್ವಿಟ್ಟರಿಗರು ಕಿಡಿಕಾರಿದ್ದು, #ಬಾಯ್ಕಾಟ್_ಕೆಬಿಸಿ_ಸೋನಿ ಟಿವಿ  ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಈ ಕೆಳಗಿನ ಅರಸರ ಪೈಕಿ ಮೊಘಲ ದೊರೆ ಔರಂಗ್‍ಜೇಬ್ ಸಮಕಾಲೀನ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ನಾಲ್ಕು ಒಪ್ಶನ್ ನೀಡಲಾಗಿತ್ತು, ಅವುಗಳೆಂದರೆ ಮಹಾರಾಣ ಪ್ರತಾಪ್, ಮಹಾರಾಣ ರಂಜೀತ್ ಸಿಂಗ್ ಹಾಗೂ ರಾಣ ಸಂಗ. ಇತರ ಎಲ್ಲ ರಾಜರ ಜತೆಗೆ ಅವರ ಉಪನಾಮೆಗಳನ್ನು ಹಾಕಲಾಗಿದ್ದರೆ ಶಿವಾಜಿ ಹೆಸರಿನ ಮುಂದೆ ಛತ್ರಪತಿ ಇರಲಿಲ್ಲ.

ದೇಶಕ್ಕೆ ದೊಡ್ಡ ಕೊಡುಗೆ ನೀಡಿದ ಶಿವಾಜಿಗೆ ಇದು ಅವಮಾನ ಎಂದು ಹಲವು ಟ್ವಿಟ್ಟರಿಗರು ರೋಷ ವ್ಯಕ್ತಪಡಿಸಿದ್ದಾರೆ. ಸೋನಿ ಟಿವಿ ತನ್ನ ಪ್ರಮಾದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿ ಗುರುವಾರದ ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದ ವೇಳೆ ಟಿಕ್ಕರ್ ಹಾಕಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)