varthabharthiಕರಾವಳಿ

ನ.13ಕ್ಕೆ ಲೋಕ ಕಲ್ಯಾಣಾರ್ಥ ಲಕ್ಷ ಕೃಷ್ಣ ಮಂತ್ರ ಹೋಮ

ವಾರ್ತಾ ಭಾರತಿ : 8 Nov, 2019

ಉಡುಪಿ, ನ. 8:ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ 20ನೆಯ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ, ಶ್ರೀಕೃಷ್ಣ ಮಠದಲ್ಲಿ ನ.13ರ ಬುಧವಾರದಂದು ಲೋಕ ಕಲ್ಯಾಣಾರ್ಥವಾಗಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಅಷ್ಟ ಮಠಾಧೀಶರುಗಳ ಉಪಸ್ಥಿತಿಯಲ್ಲಿ ಇಪ್ಪತೈದು ಕುಂಡಗಳಲ್ಲಿ ನೂರಾರು ಮಂದಿ ಋತ್ವಿಜರ ನೇತೃತ್ವದಲ್ಲಿ ಒಂದು ಲಕ್ಷ ಕೃಷ್ಣ ಮಂತ್ರ ಹೋಮ ಹಾಗೂ ಜಪ ನಡೆಯಲಿದೆ.

ಬೆಳಿಗ್ಗೆ 8 ಗಂಟೆಗೆ ಜಪಯಜ್ಞ ಪ್ರಾರಂಭವಾಗಿ,10 ಕ್ಕೆ ಪೂರ್ಣಾಹುತಿ, 10:30ಕ್ಕೆ ಪರ್ಯಾಯ ಶ್ರೀಪಾದರಿಂದ ಅನುಗ್ರಹ ಸಂದೇಶ ಹಾಗೂ ಸಂಸ್ಕಾರ ಪ್ರದೀಪ ಕೃತಿಯ ಅನಾವರಣ ನಡೆಯಲಿದೆ. ಎಲ್ಲಾ ಬ್ರಾಹ್ಮಣ ವಲಯದ ವಿಪ್ರ ಭಾಂದವರು ಜಪಯಜ್ಞದಲ್ಲಿ ಭಾಗವಹಿ ಸುವಂತೆ ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷ ಕೆ.ರಾಮದಾಸ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)