varthabharthiಕರಾವಳಿ

ಅದಮಾರು ಪರ್ಯಾಯ; ಕಚೇರಿ ಉದ್ಘಾಟನೆ

ವಾರ್ತಾ ಭಾರತಿ : 8 Nov, 2019

ಉಡುಪಿ, ನ.8: ಮುಂದಿನ ಜನವರಿಯಲ್ಲಿ ನಡೆಯುವ ಅದಮಾರು ಮದ ಶ್ರೀಕೃಷ್ಣ ಪೂಜಾ ಪರ್ಯಾಯ ಮಹೋತ್ಸವದ 2020-22ನೇ ಸಾಲಿನ ಶ್ರೀಕೃಷ್ಣ ಸೇವಾ ಬಳಗದ ಕಚೇರಿಯನ್ನು ರಥಬೀದಿಯಲ್ಲಿರುವ ಅದಮಾರು ಮಠದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀ ತೀರ್ಥರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಜಯ ಪ್ರಕಾಶ್ ಹೆಗ್ಡೆ, ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ಶ್ರೀಕೃಷ್ಣ ಸೇವಾ ಬಳಗದ ಪದಾಧಿಕಾರಿ ಗಳಾದ ಅನಂತ ನಾಯಕ್, ಪ್ರದೀಪ್ ರಾವ್, ಮಠದ ಮ್ಯಾನೇಜರ್ ರಾಘವೇಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)