varthabharthiಕರ್ನಾಟಕ

ಬಿಜೆಪಿ ಬಂಡಾಯ ಅಭ್ಯರ್ಥಿಗಳ ಉಚ್ಚಾಟನೆ

ವಾರ್ತಾ ಭಾರತಿ : 8 Nov, 2019

ಬೆಂಗಳೂರು, ನ.8: ನ.12ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಚುನಾವಣಾ ಕಣದಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ ಅಭ್ಯರ್ಥಿಗಳ ಮತ್ತು ಪಕ್ಷದ ಸೂಚನೆಯನ್ನು ಮೀರಿ ಬಂಡಾಯ ಅಭ್ಯರ್ಥಿಗಳ ಪರವಾಗಿ ಬಹಿರಂಗವಾಗಿ ಬೆಂಬಲಿಸಿದ ಪದಾಧಿಕಾರಿಗಳನ್ನು ತತ್‌ಕ್ಷಣದಿಂದ ಜಾರಿಯಾಗುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ.

ಬಂಡಾಯ ಅಭ್ಯರ್ಥಿ ಶಶಿಕಲಾ ಪರಸನಗೌಡ, ವಾರ್ಡ್ ಸಂಖ್ಯೆ 15ರ ಮಾಜಿ ಅಧ್ಯಕ್ಷ ಪರಸನಗೌಡ, ಬಂಡಾಯ ಅಭ್ಯರ್ಥಿ ಅಥೀತ್‌ ರಾವ್ ಅಂಬರಕರ್, ಜಿಲ್ಲಾ ಕಾರ್ಯದರ್ಶಿ ಎ.ವೈ.ಪ್ರಕಾಶ್, ಬಂಡಾಯ ಅಭ್ಯರ್ಥಿಗಳಾದ ಉಮಾ ಪ್ರಕಾಶ್, ಎನ್.ರಾಜಶೇಖರ್, ಪ್ರೀತಿ ರವಿಕುಮಾರ್, ವಾರ್ಡ್ ಸಂಖ್ಯೆ 44ರ ಕಾರ್ಯದರ್ಶಿ ಮಂಜುನಾಥ್(ನಲ್ಲಿ ಮಂಜಣ್ಣ) ಹಾಗೂ ಬಂಡಾಯ ಅಭ್ಯರ್ಥಿ ಪದ್ಮಾವತಿ ಮಂಜುನಾಥ್‌ರನ್ನು ಉಚ್ಛಾಟನೆ ಮಾಡಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)