varthabharthiಕರಾವಳಿ

ಕಾರ್ಕಳ: ರಾಮಸಮುದ್ರದಲ್ಲಿ ಮುಳುಗಿ ಸಾವು

ವಾರ್ತಾ ಭಾರತಿ : 8 Nov, 2019

ಕಾರ್ಕಳ, ನ.8: ಮದ್ಯಪಾನ ಮಾಡಿ ಕಾರ್ಕಳದ ರಾಮಸಮುದ್ರದಲ್ಲಿ ಈಜಲೆಂದು ಇಳಿದ ಮಧ್ಯವಯಸ್ಕರೊಬ್ಬರು ನೀರಿನಲ್ಲಿ ಮುಳುಗಿ, ಚಿಕಿತ್ಸೆಗೆಂದು ದಾಖಲಾದ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮಿಯ್ಯರು ಗ್ರಾಮದ ಜೋಡುಕಟ್ಟೆ ಮಂಗಳಪಾದೆಯ ನಿವಾಸಿ ಶ್ರೀಧರ ಪೂಜಾರಿ (42) ಅವರು ಗುರುವಾರ ಕೂಲಿ ಕೆಲಸದಿಂದ ಮರಳಿ ಬಂದು ಮದ್ಯಪಾನ ಮಾಡಿ ಸಂಜೆ 4:30ರ ಸುಮಾರಿಗೆ ತನ್ನ ಸ್ನೇಹಿತರೊಂದಿಗೆ ಈಜಲೆಂದು ರಾಮಸಮುದ್ರಕ್ಕೆ ಇಳಿದಿದ್ದರು. ಆದರೆ ಈಜುವಾಗ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದವರನ್ನು ಸ್ನೇಹಿತರು ನೀರಿನಿಂದ ಮೇಲಕ್ಕೆತ್ತಿ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಮೃತಪಟ್ಟರೆಂದು ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)