varthabharthiಕರಾವಳಿ

ಬಸ್ ಢಿಕ್ಕಿ: ವ್ಯಕ್ತಿ ಸಾವು

ವಾರ್ತಾ ಭಾರತಿ : 8 Nov, 2019

ಪಡುಬಿದ್ರಿ: ಇಲ್ಲಿಗ ಸಮೀಪದ ಬೀಡು ಎಂಬಲ್ಲಿ ಶುಕ್ರವಾರ ರಾತ್ರಿ ಕೆಎಸ್‍ಆರ್‍ಟಿಸಿ ರಾಜಹಂಸ ಬಸ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತಿದ್ದ ಕಿಶೋರ್ ಗಡಿಯಾರ್(51) ಮೃತಪಟ್ಟಿದ್ದಾರೆ.

ಹೊಟೇಲು ಕಾರ್ಮಿಕರಾಗಿದ್ದ ಕಿಶೋರ್ ಗಡಿಯಾರ್ ತಾನು ದುಡಿಯುತ್ತಿದ್ದ ಅತಿಥಿ ಹೊಟೇಲ್‍ನತ್ತ ಬರುತ್ತಿದ್ದಾಗ ಉಡುಪಿಯಿಂದ ಮಂಗಳೂರಿನತ್ತ ಹೋಗುತ್ತಿದ್ದ ಬಸ್‍ ಢಿಕ್ಕಿಯಾಗಿ ಈ ಅಪಘಾತವು ಸಂಭವಿಸಿದೆ. ಅವಿವಾಹಿತರಾಗಿದ್ದ ಇವರ ತಾಯಿ ಇತ್ತೀಚೆಗಷ್ಟೇ ಮೃತರಾಗಿದ್ದರು.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)