varthabharthi


ಅಂತಾರಾಷ್ಟ್ರೀಯ

ಹಾಂಕಾಂಗ್: ಪ್ರತಿಭಟನೆಯ ವೇಳೆ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು

ವಾರ್ತಾ ಭಾರತಿ : 8 Nov, 2019

 ಹಾಂಕಾಂಗ್, ನ. 8: ಹಾಂಕಾಂಗ್‌ನಲ್ಲಿ ಕಳೆದ ವಾರ ಪೊಲೀಸರು ಮತ್ತು ಪ್ರತಿಭಟನಕಾರರ ನಡುವಿನ ಘರ್ಷಣೆಯ ವೇಳೆ ಬಹುಮಹಡಿಗಳ ಕಾರು ಪಾರ್ಕ್‌ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಜ್ಞಾನ ಪದವಿ ವಿದ್ಯಾರ್ಥಿ ಅಲೆಕ್ಸ್ ಚೊವ್ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು ಎಂದು ಕ್ವೀಣ್ ಎಲಿಝಬೆತ್ ಆಸ್ಪತ್ರೆ ತಿಳಿಸಿದೆ.

ಸೆಯುಂಗ್ ಕ್ವಾನ್ ಒ ಜಿಲ್ಲೆಯಲ್ಲಿ ರವಿವಾರ ತಡ ರಾತ್ರಿ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆಗಳು ಸಂಭವಿಸಿದ ಬಳಿಕ, ವಿದ್ಯಾರ್ಥಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಸೋಮವಾರ ಮುಂಜಾನೆ ಆಸ್ಪತ್ರೆಗೆ ಸಾಗಿಸಲಾಗಿತ್ತು.

 ವಿದ್ಯಾರ್ಥಿ ಅಲೆಕ್ಸ್ ಚೊವ್ ಚೀನಾ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಅವರ ತಂದೆ ಅದೇ ಸರಕಾರದ ಪೊಲೀಸ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)