ನ.10: ಸೈಯದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ವತಿಯಿಂದ ಮಿಲಾದ್ ಮೆರವಣಿಗೆ
ಮಂಗಳೂರು, ನ. 8: ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ನ.10ರಂದು ಬೆಳಗ್ಗೆ 7 ಗಂಟೆಗೆ ಉಳ್ಳಾಲದಲ್ಲಿ ಮಿಲಾದ್ ಮೆರವಣಿಗೆ ನಡೆಯಲಿದೆ.
ಮಿಲಾದ್ ಜಾಥಾವು ಉಳ್ಳಾಲ ಆಳಕಲ ಜುಮಾ ಮಸೀದಿಯಿಂದ ಹೊರಟು ಮಂಟಿಲ ಮಾರ್ಗವಾಗಿ ಒಳಪೇಟೆ- ಪೆರ್ಮನ್ನೂದು- ಟಿ.ಸಿ.ರೋಡ್- ಅಕ್ಕಲಕೆರೆ- ಮೇಲಂಗಡಿ- ಮಾಸ್ತಿಕಟ್ಟೆ ಜಂಕ್ಷನ್- ಮೇಲಂಗಡಿ ಹೊಸಪಳ್ಳಿ ಮಾರ್ಗವಾಗಿ ದರ್ಗಾ ಮುಖ್ಯ ಪ್ರವೇಶ ದ್ವಾರದ ಮೂಲಕ ಸಾಗಿ 10:20ಕ್ಕೆ ಉಳ್ಳಾಲ ದರ್ಗಾದಲ್ಲಿ ಸಮಾಪ್ತಿಗೊಳ್ಳಲಿದೆ.
ವಿಧ್ಯಾರ್ಥಿಗಳು ಆಯಾ ಮದ್ರಸ ಯುನಿಫಾರ್ಮ್ನೊಂದಿಗೆ ಮತ್ತು ಇತರರು ಬಿಳಿ ವಸ್ತ್ರ ಮತ್ತು ಟೊಪ್ಪಿಯೊಂದಿಗೆ ಭಾಗವಹಿಸಬೇಕು. ಮೆರವಣಿಗೆಯುದ್ದಕ್ಕೂ ದಫ್ ಮತ್ತು ಸ್ಕೌಟ್ ತಂಡಗಳು ಎಲ್ಲ ಮೊಹಲ್ಲಾಗಳಿಂದಲೂ ಭಾಗವಹಿಸಲು ಅವಕಾಶವಿದೆ ಎಂದು ಉಳ್ಳಾಲದ ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಪ್ರಕಟನೆ ತಿಳಿಸಿದೆ.
Next Story