varthabharthiಅಂತಾರಾಷ್ಟ್ರೀಯ

ಗಣಿಯಲ್ಲಿ ಸ್ಫೋಟ; 30 ಕಾರ್ಮಿಕರು ಒಳಗೆ

ವಾರ್ತಾ ಭಾರತಿ : 8 Nov, 2019

ಬರ್ಲಿನ್, ನ. 8: ಪೂರ್ವ ಜರ್ಮನಿಯ ಪಟ್ಟಣವೊಂದರಲ್ಲಿರುವ ಗಣಿಯಲ್ಲಿ ಸ್ಫೋಟ ಸಂಭವಿಸಿದ ಬಳಿಕ, ಸುಮಾರು 30 ಕಾರ್ಮಿಕರು ಗಣಿಯೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಪ್ರಾದೇಶಿಕ ಪತ್ರಿಕೆ ‘ಮಿಟಲ್‌ಡಾಶ್ ಝೀಟಂಗ್’ ಶುಕ್ರವಾರ ವರದಿ ಮಾಡಿದೆ.

ಟ್ಯೂಟ್‌ಶೆಂತಲ್ ಪಟ್ಟಣದಲ್ಲಿರುವ ಗಣಿಯ ಸುರಕ್ಷಿತ ಸ್ಥಳದಲ್ಲಿ ಅವರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

ಜರ್ಮನಿ ರಾಜಧಾನಿ ಬರ್ಲಿನ್‌ನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಹ್ಯಾಲ್ ನಗರದ ಹೊರವಲಯದಲ್ಲಿ ಟ್ಯೂಟ್‌ಶೆಂತಲ್ ಪಟ್ಟಣವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)