varthabharthi

ರಾಷ್ಟ್ರೀಯ

ಆಮಿರ್ ಖಾನ್ ಹೊಸ ಚಿತ್ರದಲ್ಲಿ ಶಾರುಖ್ ಖಾನ್ !

ವಾರ್ತಾ ಭಾರತಿ : 8 Nov, 2019

ಫೋಟೊ : Instagram

ಹೊಸದಿಲ್ಲಿ: ಬುಧವಾರ (ನ.6) ತನ್ನ ಹೊಸ ಚಿತ್ರ ಲಾಲ್ ಸಿಂಗ್ ಛಡ್ಡಾದ ಲೋಗೋವನ್ನು ಸೂಪರ್ ಸ್ಟಾರ್ ಆಮಿರ್ ಖಾನ್ ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದಾಗ ಒಂದು ಅನಿರೀಕ್ಷಿತ ಅಚ್ಚರಿ ಅಲ್ಲಿತ್ತು.

ಆಮಿರ್ ರ ಈ ಹೊಸ ಚಿತ್ರದಲ್ಲಿ ಇನ್ನೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಇದ್ದಾರೆ !

ಆದರೆ ಗಡಿಬಿಡಿ ಮಾಡಿಕೊಳ್ಳಬೇಡಿ. ಶಾರುಖ್ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರು ಈ ಚಿತ್ರದ ಸಹ ನಿರ್ಮಾಪಕ. ಅವರ ಕಂಪೆನಿ ರೆಡ್ ಚಿಲ್ಲೀಸ್ ಆಮಿರ್ ಖಾನ್ ಜೊತೆ ಹೊಸ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದೆ.

1994ರ ಖ್ಯಾತ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್ ನ ಹಿಂದಿ ಅವತರಣಿಕೆಯಲ್ಲಿ ಆಮಿರ್ ಮುಖ್ಯ ಪಾತ್ರದಲ್ಲಿದ್ದಾರೆ. ಸೀಕ್ರೆಟ್ ಸೂಪರ್ ಸ್ಟಾರ್ ಖ್ಯಾತಿಯ ಅದ್ವೈತ್ ಚಂದನ್ ಇದರ ನಿರ್ದೇಶಕರು. ಚಿತ್ರ ಡಿಸೆಂಬರ್ 2020ರಲ್ಲಿ ಬಿಡುಗಡೆಯಾಗಲಿದೆ.

ಖ್ಯಾತ ನಟ ಟಾಮ್ ಹ್ಯಾಂಕ್ಸ್ ಮುಖ್ಯ ಪಾತ್ರದಲ್ಲಿದ್ದ ಫಾರೆಸ್ಟ್ ಗಂಪ್ ಹಲವು ಆಸ್ಕರ್ ಪ್ರಶಸ್ತಿ ಬಾಚಿದ್ದ ಚಿತ್ರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)