varthabharthi

ಸಿನಿಮಾ

ಕನ್ನಡದ 'ಬೆಲ್ ಬಾಟಂ' ಹಿಂದಿ ರಿಮೇಕ್ ನಲ್ಲಿ ಬಾಲಿವುಡ್ ನ ಈ ಸ್ಟಾರ್ ನಾಯಕ!

ವಾರ್ತಾ ಭಾರತಿ : 9 Nov, 2019

ಮುಂಬೈ, ನ.9: ಈ ವರ್ಷದ ಸೂಪರ್ ಹಿಟ್ ಕನ್ನಡ ಚಿತ್ರಗಳಲ್ಲೊಂದಾಗಿರುವ 'ಬೆಲ್ ಬಾಟಂ' ರಿಮೇಕ್ ಹಿಂದಿಯಲ್ಲಿ ತಯಾರಾಗಲಿದ್ದು ನಿಖಿಲ್ ಅಡ್ವಾಣಿ ನಿರ್ಮಾಣದ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

'ಬೆಲ್ ಬಾಟಂ' ಕನ್ನಡ ಚಲನಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದರೆ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ ಈ ಚಿತ್ರದ ಮುಖ್ಯ ತಾರಾಗಣದಲ್ಲಿದ್ದರು. ಪರಿಪೂರ್ಣ ಮನರಂಜನೆಯ ಈ ಚಲನಚಿತ್ರ 80ರ ದಶಕದ ಚಿತ್ರಣವನ್ನು ಸುಂದರವಾಗಿ ಪ್ರೇಕ್ಷಕರ ಮುಂದಿರಿಸಿತ್ತು.

ಈ ಚಿತ್ರವನ್ನು ವೀಕ್ಷಿಸಿದ್ದ ನಿಖಿಲ್ ಅಡ್ವಾಣಿ ಅದರ ಹಿಂದಿ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಚಿತ್ರದ ಸ್ಕ್ರಿಪ್ಟ್ ತಯಾರಿ ಪ್ರಕ್ರಿಯೆ ನಡೆಯುತ್ತಿದೆ. ನಿಖಿಲ್ ಅಡ್ವಾಣಿ ಕತೆ ವಶು ಭಗ್ನಾನಿ ಹಾಗೂ ಟಿ-ಸೀರೀಸ್‍ನ ಭೂಷಣ್ ಕುಮಾರ್ ಈ ಚಿತ್ರದ ಸಹ ನಿರ್ಮಾಪಕರಾಗಲಿದ್ದಾರೆ. ಚಿತ್ರದ ಮೂಲ ಹೆಸರನ್ನು ಉಳಿಸಿಕೊಳ್ಳಲು ಸದ್ಯ ನಿರ್ಧರಿಸಲಾಗಿದೆಯಾದರೂ ಅಂತಿಮ ನಿರ್ಧಾರ ಇನ್ನಷ್ಟೇ ಕೈಗೊಳ್ಳಬೇಕಿದೆ.

ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)