ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ಪತ್ನಿ ಸರ್ವಮಂಗಳಮ್ಮ ನಿಧನ
ಬೆಂಗಳೂರು, ನ.9: ಮಾಜಿ ಸಿಎಂ ದಿವಂಗತ ಜೆ.ಎಚ್.ಪಟೇಲ್ ಅವರ ಪತ್ನಿ ಸರ್ವಮಂಗಳಮ್ಮ ಪಟೇಲ್ (85) ಅವರು ಇಂದು ನಿಧನ ಹೊಂದಿದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರ್ವಮಂಗಳಮ್ಮ ಅವರು ಇಂದು ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ತನ್ನ ಪುತ್ರ ಮಹಿಮಾ ಪಟೇಲ್ ಮನೆಯಲ್ಲಿ ನಿಧನರಾದರು.
ಸರ್ವಮಂಗಳಮ್ಮ ಮಾಜಿ ಶಾಸಕ ಮಹಿಮಾ ಪಟೇಲ್ ಸೇರಿ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಾಳೆ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಗನೂರಿಗೆ ಸರ್ವಮಂಗಳಮ್ಮ ಪಾರ್ಥಿವ ಶರೀರ ಕೊಂಡೊದ್ದು, ಗ್ರಾಮದ ಮನೆಯ ಮುಂದೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಅವರ ಜಮೀನಿನಲ್ಲಿ ಇರುವ ಮಾಜಿ ಸಿಎಂ ಜೆಎಚ್ ಪಟೇಲ್ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Next Story