varthabharthi

ರಾಷ್ಟ್ರೀಯ

ವಿಡಿಯೋ ವೈರಲ್

'ಮನೆಯವರ ಹೊಟ್ಟೆ ಹೇಗೆ ತುಂಬಿಸಲಿ': ಕೇವಲ 8 ರೂ.ಗೆ ಈರುಳ್ಳಿ ಮಾರಿ ಕಣ್ಣೀರಿಟ್ಟ ರೈತ

ವಾರ್ತಾ ಭಾರತಿ : 11 Nov, 2019

ಹೊಸದಿಲ್ಲಿ: ತನ್ನ ಈರುಳ್ಳಿ ಬೆಳೆಯನ್ನು ಕೆಜಿ ಒಂದಕ್ಕೆ ಕೇವಲ 8 ರೂ.ಗೆ ಮಾರಾಟ ಮಾಡಿ ರೈತನೊಬ್ಬ ಕಣ್ಣೀರಿಟ್ಟ ವಿಡಿಯೋವೊಂದು ವೈರಲ್ ಆಗಿದೆ.

"ನನ್ನ ಕೃಷಿಭೂಮಿಯಿಂದ ಈರುಳ್ಳಿ ಕೀಳಲು ನಾನು ಕೆಲಸದವರನ್ನು ನೇಮಿಸಬೇಕಿದೆ. ಅವರಿಗೆಲ್ಲಾ ನಾನು ಹೇಗೆ ಹಣ ಪಾವತಿಸಲಿ. ನನ್ನ ಕುಟುಂಬದ ಹೊಟ್ಟೆ ತುಂಬಿಸಲು ನಾನು ಏನನ್ನು ತೆಗೆದುಕೊಂಡು ಹೋಗಲಿ?" ಎಂದು ಅಹ್ಮದಾಬಾದ್ ನ ಈ ರೈತ ಕಣ್ಣೀರಿಟ್ಟಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)