ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ಸ್ಫೋಟ: ಯುವಕ ಮೃತ್ಯು
Photo: indiatoday.in
ಭುಬನೇಶ್ವರ್, ನ.12: ರಾತ್ರಿ ಚಾರ್ಜ್ ಗೆ ಇಡಲಾಗಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು 22 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆ ಒಡಿಶಾದ ಜಗತ್ಸಿಂಗ್ಪುರ್ ಜಿಲ್ಲೆಯಿಂದ ವರದಿಯಾಗಿದೆ. ಮೊಬೈಲ್ ಫೋನ್ ಚಾರ್ಜ್ಗೆ ಇಡಲಾದ ಕೊಠಡಿಯಲ್ಲಿಯೇ ಯುವಕ ಮಲಗಿದ್ದನೆನ್ನಲಾಗಿದೆ.
ಮೃತ ಯುವಕನನ್ನು ಕುನಾ ಪ್ರಧಾನ್ ಎಂದು ಗುರುತಿಸಲಾಗಿದೆ. ಆತ ಪರದೀಪ್ ನ ಜಗನ್ನಾಥ ದೇವಸ್ಥಾನ ನಿರ್ಮಾಣ ಕಾಮಗಾರಿಯ ಕಾರ್ಮಿಕನಾಗಿದ್ದ.
ಬೆಳಗ್ಗೆ ವಿಷಯ ತಿಳಿದ ಕೂಡಲೇ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮೃತಪಟ್ಟಿದ್ದ ಎಂದು ಸ್ಥಳೀಯ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜಗತ್ಸಿಂಗ್ ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story