ಮಾಲತಿ
ಬಂಟ್ವಾಳ, ನ.12: ಬಂಟ್ವಾಳ ಪುರಸಭೆಯ ಮಾಜಿ ಸದಸ್ಯೆ, ಪಾಣೆಮಂಗಳೂರು-ಉಪ್ಪುಗುಡ್ಡೆ ನಿವಾಸಿ ಮಾಲತಿ ಗಣೇಶ್ ಪುರುಷ (48) ಅವರು ಅಲ್ಪ ಕಾಲದ ಅನಾರೋಗ್ಯದಿಂದ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಬಂಟ್ವಾಳ ಪುರಸಭೆಯ ಮಾಜಿ ಸದಸ್ಯೆಯಾಗಿದ್ದ ಇವರು, ಶ್ರೀ ಪತಂಜಲಿ ಯೋಗ ತರಬೇತಿ ಶಿಬಿರದ ಸದಸ್ಯರಾಗಿದ್ದು, ತುಂಬೆ ಬಿ ಎ ಸಮೂಹ ಸಂಸ್ಥೆಯ ಉದ್ಯೋಗಿಯಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಚಿಕಿತ್ಸೆಗೆ ಸ್ಪಂದಿಸದ ಅವರು ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಪತಿ, ತಾಯಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪುತ್ರ ಇತ್ತೀಚೆಗೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದು, ಆತ ಬುಧವಾರ ವಾಪಸು ಬರುವ ಕಾರಣ ಮೃತರ ಅಂತ್ಯ ಸಂಸ್ಕಾರ ಬುಧವಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story