ಸರ್ಕಾರಿ ಆಸ್ಪತ್ರೆಯಲ್ಲಿ ಎಂಟು ತಿಂಗಳ ಗರ್ಭಿಣಿ ಮೃತ್ಯು
ಕೊಪ್ಪ, ನ.12: ಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಎಂಟು ತಿಂಗಳ ಗರ್ಭಿಣಿಯೋರ್ವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೂಡಿಗೆರೆ ತಾಲೂಕಿನ ಕಳಸ ಬಳಿಯ ಕುಂಬಾರುಕುಡಿಗೆ ಗ್ರಾಮದ ಕುಮಾರ್ ಅವರ ಪತ್ನಿ ಭಾಗ್ಯ (32) ಎಂಬವರು ಮೃತ ಎಂಟು ತಿಂಗಳ ಗರ್ಭಿಣಿ.
ಭಾಗ್ಯ ಅವರನ್ನು ಕಳಸದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ರಾತ್ರಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕೊಂಡೊಯ್ಯಲು ಅಲ್ಲಿನ ವೈದ್ಯರು ಸೂಚಿಸಿದ ಮೇರೆಗೆ ಕೊಪ್ಪ ಆಸ್ಪತ್ರೆಗೆ ಭಾಗ್ಯರನ್ನು ಸೇರಿಸಲಾಗಿತ್ತು. ಆದರೆ ಅಲ್ಲಿ ಹೃದಯ ಸಂಬಂಧ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Next Story