ಕಾಬೂಲ್ ನಲ್ಲಿ ಬಾಂಬ್ ಸ್ಫೋಟ: 7 ಸಾವು
ನಾಲ್ವರು ವಿದೇಶಿಯರಿಗೆ ಗಾಯ
ಫೋಟೋ: aljazeera.com
ಕಾಬೂಲ್, ನ. 13: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಬುಧವಾರ ಬೆಳಗ್ಗಿನ ನಿಬಿಡ ಅವಧಿಯಲ್ಲಿ ಸ್ಫೋಟಕಗಳಿಂದ ತುಂಬಿದ್ದ ಮಿನಿ ವ್ಯಾನೊಂದು ಸ್ಫೋಟಿಸಿದಾಗ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ ನಾಲ್ವರು ವಿದೇಶಿಯರು ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಕೆನಡದ ಖಾಸಗಿ ಭದ್ರತಾ ಕಂಪೆನಿಗೆ ಸೇರಿದ ವಾಹನವೊಂದನ್ನು ಗುರಿಯಾಗಿಸಿ ಬಾಂಬನ್ನು ಸ್ಫೋಟಿಸಲಾಯಿತು ಎಂದು ಅವರು ಹೇಳಿದರು. ಆಂತರಿಕ ಸಚಿವಾಲಯ ಮತ್ತು ಕಾಬೂಲ್ ವಿಮಾನ ನಿಲ್ದಾಣದ ಸಮೀಪದಲ್ಲಿ ಸ್ಫೋಟ ಸಂಭವಿಸಿದೆ.
ಮೃತಪಟ್ಟವರೆಲ್ಲರೂ ಅಫ್ಘಾನ್ ನಾಗರಿಕರು. ಗಾಯಗೊಂಡವರಲ್ಲಿ ಕೆನಡ ಭದ್ರತಾ ಕಂಪೆನಿಯ ಸಿಬ್ಬಂದಿಯಿದ್ದಾರೆ.
Next Story