ತನ್ನ ಪರ ಘೋಷಣೆ ಕೂಗುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಕೊಹ್ಲಿ ಕಿವಿಮಾತು ಏನು ಗೊತ್ತೇ?
Photo: Twitter(@BCCI)
ಇಂದೋರ್, ನ.14: ತನ್ನ ಬದಲಿಗೆ ಬೌಲರ್ ಮುಹಮ್ಮದ್ ಶಮಿಗೆ ಚಪ್ಪಾಳೆ ತಟ್ಟಿ ಹುರಿದುಂಬಿಸುವಂತೆ ಇಂದೋರ್ನ ಕ್ರಿಕೆಟ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಭಾರತದ ನಾಯಕ ವಿರಾಟ್ ಕೊಹ್ಲಿ ಎಲ್ಲರ ಹೃದಯ ಗೆದ್ದಿದ್ದಾರೆ. ಕೊಹ್ಲಿ ಅಭಿಮಾನಿಗಳಿಗೆ ಕಿವಿ ಮಾತು ಹೇಳುತ್ತಿರುವ ವಿಡಿಯೊ ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಭಾರತ ಹಾಗೂ ಬಾಂಗ್ಲಾದೇಶದ ಮಧ್ಯೆ ಗುರುವಾರ ಇಲ್ಲಿನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಈ ಅಪರೂಪದ ಘಟನೆ ನಡೆದಿದೆ.
ಪ್ರೇಕ್ಷಕರ ಪ್ರೋತ್ಸಾಹ ಹಾಗೂ ನಾಯಕ ಕೊಹ್ಲಿಯ ಬೆಂಬಲವು ಮುಹಮ್ಮದ್ ಶಮಿಗೆ ಮ್ಯಾಜಿಕ್ನಂತೆ ಕೆಲಸ ಮಾಡಿದ್ದು, ಅವರು 54ನೇ ಓವರ್ನ ಐದನೇ ಎಸೆತದಲ್ಲಿ ಮುಶ್ಫಿಕುರ್ರಹೀಂ(43) ವಿಕೆಟನ್ನು ಉರುಳಿಸಿದರು. ಶಮಿ 54ನೇ ಓವರ್ನ 6ನೇ ಎಸೆತದಲ್ಲಿ ಖಾತೆ ತೆರೆಯುವ ಮೊದಲೇ ಮೆಹಿದಿ ಹಸನ್ರನ್ನು ಎಲ್ಬಿಡಬ್ಲ್ಯ ಬಲೆಗೆ ಬೀಳಿಸಿದರು. ಶಮಿ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಟೀ ವಿರಾಮದ ವೇಳೆ 140 ರನ್ಗೆ 7 ವಿಕೆಟ್ಗಳನ್ನು ಕಳೆದುಕೊಂಡಿತ್ತು.
2019ರ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ ಶಮಿ ಇಂದು ಟೆಸ್ಟ್ನಲ್ಲಿ ಚೊಚ್ಚಲ ಹ್ಯಾಟ್ರಿಕ್ ವಿಕೆಟ್ ಪಡೆಯುವ ಹಾದಿಯಲ್ಲಿದ್ದರು. ಹೊಸ ಬ್ಯಾಟ್ಸ್ಮನ್ ತೈಜುಲ್ ಇಸ್ಲಾಂ ತಾನೆದುರಿಸಿದ ಮೊದಲ ಎಸೆತವನ್ನು ಯಶಸ್ವಿಯಾಗಿ ಎದುರಿಸಿ ಶಮಿಗೆ ಹ್ಯಾಟ್ರಿಕ್ ನಿರಾಕರಿಸಿದರು. ಶಮಿ 27 ರನ್ಗಳಿಗೆ ಮೂರು ವಿಕೆಟ್ಗಳನ್ನು ಪಡೆದು ಮಿಂಚಿದರು.
Crowd cheering KOHLI KOHLI
— Savithriraj (@Savithriraj1) November 14, 2019
but he asked to crowd
" I m not doing anything, cheer for him [SHAMI] "
What a Person ! @imVkohli
What a captain !#INDvBAN #ViratKohli#Viswasam #shami#Indvsban pic.twitter.com/td3Q8Oa9Ov