varthabharthi


ರಾಷ್ಟ್ರೀಯ

​ರಸ್ತೆ ಅಪಘಾತದಲ್ಲಿ ಮರಾಠಿ ಗಾಯಕಿ ಮೃತ್ಯು

ವಾರ್ತಾ ಭಾರತಿ : 15 Nov, 2019

ಫೋಟೊ : instagram

ಮುಂಬೈ: ಮರಾಠಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಗೀತಾ ಮಾಲಿ ಗುರುವಾರ ಥಾಣೆ ಜಿಲ್ಲೆ ವ್ಯಾಪ್ತಿಯ ಮುಂಬೈ- ಆಗ್ರಾ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಮೆರಿಕದಿಂದ ವಾಪಸ್ಸಾಗುತ್ತಿದ್ದ ಗೀತಾ ಹಾಗೂ ಅವರ ಪತಿ ವಿಜಯ್ ಅವರು ಮಾಲಿಯವರ ಹುಟ್ಟೂರು ನಾಸಿಕ್‌ಗೆ ತೆರಳುತ್ತಿದ್ದಾಗ, ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್‌ಗೆ ಕಾರು ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಗೀತಾ ಹಾಗೂ ವಿಜಯ್ ಇಬ್ಬರೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಶಹಾಪುರ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗೀತಾ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಗೀತಾ ಕೆಲ ಮರಾಠಿ ಚಿತ್ರಗಳಿಗೆ ಹಾಡಿದ್ದು ಮಾತ್ರವಲ್ಲದೇ ತಮ್ಮದೇ ಸ್ವಂತ ಮ್ಯೂಸಿಕ್ ಆಲ್ಬಂಗಳ ಮೂಲಕವೂ ಜನಪ್ರಿಯರಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)