ಅಲೆಕ್ಸಾಂಡರ್ ಝ್ವೆರೆವ್ ಸೆಮಿ ಫೈನಲ್ಗೆ ಲಗ್ಗೆ
ಎಟಿಪಿ ಫೈನಲ್ಸ್
ಲಂಡನ್, ನ.16: ಹಾಲಿ ಚಾಂಪಿಯನ್ ಅಲೆಕ್ಸಾಂಡರ್ ಝ್ವೆರೆವ್ ಎಟಿಪಿ ಫೈನಲ್ಸ್ನಲ್ಲಿ ಶುಕ್ರವಾರ ಅಂತಿಮ ನಾಲ್ಕರ ಹಂತ ತಲುಪಿದರು. ಝ್ವೆರೆವ್ ಗೆಲುವಿನೊಂದಿಗೆ ಸ್ಪೇನ್ನ ದಿಗ್ಗಜ ರಫೆಲ್ ನಡಾಲ್ ಟೂರ್ನಿಯಿಂದ ನಿರ್ಗಮಿಸಿದರು.
ಈಗಾಗಲೇ ಟೂರ್ನಿಯ ಸ್ಪರ್ಧೆಯಿಂದ ಹೊರಬಿದ್ದಿರುವ ಡ್ಯಾನಿಲ್ ಮೆಡ್ವೆಡೆವ್ರನ್ನು 6-4, 7-6(4) ಸೆಟ್ಗಳಿಂದ ಮಣಿಸಿದ ಝ್ವೆರೆವ್ ಅವರು ಗುಂಪಿನಲ್ಲಿ ಸ್ಟೆಫನೊಸ್ ಸಿಟ್ಸಿಪಾಸ್ ಬಳಿಕ ಎರಡನೇ ಸ್ಥಾನ ಪಡೆದಿದ್ದು, ಸೆಮಿ ಫೈನಲ್ನಲ್ಲಿ ಡೊಮಿನಿಕ್ ಥೀಮ್ರನ್ನು ಎದುರಿಸಲಿದ್ದಾರೆ.
ಇದಕ್ಕೂ ಮೊದಲು ನಡೆದ ಸಿಂಗಲ್ಸ್ ಪಂದ್ಯದಲ್ಲಿ ನಡಾಲ್ ಅವರು ಸಿಟ್ಸಿಪಾಸ್ ವಿರುದ್ಧ 6-7(4), 6-4, 7-5 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ರೌಂಡ್ ರಾಬಿನ್ ಹಂತದಲ್ಲಿ ಎರಡನೇ ಜಯ ಸಾಧಿಸಿದರು. ಬಿಗ್ ತ್ರಿ ಪೈಕಿ ರೋಜರ್ ಫೆಡರರ್ ಮಾತ್ರ ಸೆಮಿ ಫೈನಲ್ಗೆ ತಲುಪಿದ್ದು, ನಡಾಲ್ ಹಾಗೂ ನೊವಾಕ್ ಜೊಕೊವಿಕ್ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ. ಸಿಟ್ಸಿಪಾಸ್ ಸೆಮಿ ಫೈನಲ್ ಸುತ್ತಿನಲ್ಲಿ ಆರು ಬಾರಿಯ ಚಾಂಪಿಯನ್ ರೋಜರ್ ಫೆಡರರ್ರನ್ನು ಎದುರಿಸಲಿದ್ದಾರೆ.
ಏಳನೇ ರ್ಯಾಂಕಿನ ಜರ್ಮನಿ ಆಟಗಾರ ಝ್ವೆರೆವ್ ಕಳೆದ ಎಟಿಪಿ ಫೈನಲ್ಸ್ನ ಸೆಮಿ ಫೈನಲ್ನಲ್ಲಿ ಫೆಡರರ್ರನ್ನು ಹಾಗೂ ಫೈನಲ್ನಲ್ಲಿ ಜೊಕೊವಿಕ್ರನ್ನು ಸೋಲಿಸಿದ್ದರು.