ಮನೆಯ ಹಿತ್ತಲಲ್ಲಿ ಫುಟ್ಬಾಲ್ ವೀಕ್ಷಿಸುತ್ತಿದ್ದ ನಾಲ್ವರ ಗುಂಡಿಕ್ಕಿ ಹತ್ಯೆ
ಲಾಸ್ ಏಂಜಲಿಸ್, ನ. 18: ಕ್ಯಾಲಿಫೋರ್ನಿಯದ ಮನೆಯೊಂದರ ಹಿತ್ತಲಲ್ಲಿ ರವಿವಾರ ಫುಟ್ಬಾಲ್ ಪಂದ್ಯವೊಂದನ್ನು ವೀಕ್ಷಿಸುತ್ತಿದ್ದ ನಾಲ್ವರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ ಹಾಗೂ ಆರು ಮಂದಿಯನ್ನು ಗಾಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಲಾಸ್ ಏಂಜಲಿಸ್ನ ಉತ್ತರಕ್ಕೆ ಸುಮಾರು 320 ಕಿ.ಮೀ. ದೂರದಲ್ಲಿರುವ ಫ್ರೆಸ್ನೊ ಎಂಬ ಪಟ್ಟಣದ ಮನೆಯ ಹೊರಗಡೆ ಸೇರಿದ ಸುಮಾರು 35 ಮಂದಿಯ ಮೇಲೆ ಓರ್ವ ವ್ಯಕ್ತಿ ಗುಂಡು ಹಾರಿಸಿದನು. ಬಳಿಕ ಸ್ಥಳಕ್ಕೆ ಪೊಲೀಸರನ್ನು ಕರೆಸಲಾಯಿತು.
‘‘ಮೂವರು ಸ್ಥಳದಲ್ಲೇ ಮೃತಪಟ್ಟರು ಹಾಗೂ ಆರು ಮಂದಿಯನ್ನು ಗುಂಡಿನ ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿದೆ’’ ಎಂದು ಫ್ರೆಸ್ನೊ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಎಷ್ಟು ಮಂದಿ ಆಕ್ರಮಣಕಾರರು ಇದ್ದರು ಎನ್ನುವುದು ಪೊಲೀಸರಿಗೆ ತಿಳಿದಿಲ್ಲ.
Next Story