varthabharthi


ರಾಷ್ಟ್ರೀಯ

ದಿಗ್ಬಂಧನದಲ್ಲಿರುವ ಫಾರೂಕ್ ಅಬ್ದುಲ್ಲಾರನ್ನು ರಕ್ಷಣಾ ಸಂಸದೀಯ ಸಲಹಾ ಸಮಿತಿಗೆ ನೇಮಿಸಿದ ಸರಕಾರ

ವಾರ್ತಾ ಭಾರತಿ : 21 Nov, 2019

ಹೊಸದಿಲ್ಲಿ: ಸಾರ್ವಜನಿಕ ಸುರಕ್ಷತಾ ಕಾಯಿದೆಯನ್ವಯ  ಬಂಧನದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹಾಗೂ ಜಮ್ಮು ಕಾಶ್ಮೀರದ ಮಾಜಿ ಸೀಎಂ ಫಾರೂಕ್ ಅಬ್ದುಲ್ಲಾ  ಅವರನ್ನು  ರಕ್ಷಣಾ ಸಚಿವಾಲಯದ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ಎಂಬತ್ತೊಂದು ವರ್ಷದ ಫಾರೂಕ್ ಅಬ್ದುಲ್ಲಾ ಅವರ ಹೆಸರು ಒಟ್ಟು 21 ಮಂದಿ ಸದಸ್ಯರ ಪಟ್ಟಿಯಲ್ಲಿ  ಪ್ರಥಮ ಸ್ಥಾನದಲ್ಲಿದೆ. ಸಮಿತಿಯ ನೇತೃತ್ವವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಹಿಸಿದ್ದಾರೆ.

ಸಮಿತಿಗೆ ಭೋಪಾಲ ಸಂಸದೆ ಹಾಗೂ ಮಾಲೆಗಾಂವ್ ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್‍ರನ್ನು ನೇಮಕಗೊಳಿಸಿರುವುದು ಈಗಾಗಲೇ ವಿವಾದಕ್ಕೀಡಾಗಿದೆ. ಸಮಿತಿಯ ಇತರ ಸದಸ್ಯರರಲ್ಲಿ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಇದ್ದಾರೆ.

ಆಗಸ್ಟ್ 5ರಂದು ಕೇಂದ್ರ ಸರಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳಿಗೆ ಮುಂಚಿತವಾಗಿ ಅಬ್ದುಲ್ಲಾ ಅವರನ್ನು ಸರಕಾರ ದಿಗ್ಬಂಧನದಲ್ಲಿರಿಸಿತ್ತು.  ಸೆಪ್ಟೆಂಬರ್ 17ರಂದು ಅವರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯಿದೆಯನ್ನು ಹೇರಲಾಗಿತ್ತು.

ಫಾರೂಕ್ ಅವರನ್ನು ಶ್ರೀನಗರದ ಅವರ ನಿವಾಸದಲ್ಲಿ ದಿಗ್ಬಂಧನದಲ್ಲಿರಿಸಿ ಈಗ 100 ದಿನಗಳಿಗೆ ಮೇಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)