varthabharthi


ಕರಾವಳಿ

ಮಂಗಳೂರು : ಸಾರಸ್ವತ ಬ್ರಾಹ್ಮಣ ಇತಿಹಾಸದ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

ವಾರ್ತಾ ಭಾರತಿ : 22 Nov, 2019

ಮಂಗಳೂರು, ನ.22:  ಇತಿಹಾಸ ತಜ್ಞ ಡಾ. ಕಸ್ತೂರಿ ಮೋಹನ್ ಪೈ ನಗರದ ಬಲ್ಲಾಳ್ ಭಾಗ್ ಬಳಿಯ ಕೊಡಿಯಾಲ ಗುತ್ತು ನಿವಾಸದಲ್ಲಿ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಹೆರಿಟೇಜ್ ಸಂಘಟನೆಯ ವತಿಯಿಂದ ನ.30ರವರೆಗೆ ನಡೆಯಲಿರುವ ಸಾರಸ್ವತ ಬ್ರಾಹ್ಮಣ ಸಮುದಾಯ ಮಂಗಳೂರಿಗೆ ನೀಡಿದ ಐತಿಹಾಸಿಕ ಕೊಡಗೆಯ ಬಗ್ಗೆ ಮಾಹಿತಿ ನೀಡುವ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಪುರಾಣದಲ್ಲಿ ಹಿಮಾಲಯದಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದ ಸರಸ್ವತಿ ನದಿ ತೀರದಲ್ಲಿ ವಾಸಿಸುತ್ತಿದ್ದ ಜನಸಮುದಾಯವೊಂದು ಕಾಲಾಂತರದಲ್ಲಿ ಪಾಕೃತಿಕ ವಿಕೋಪದಿಂದ ಸರಸ್ವತಿ ನದಿ ಕಣ್ಮರೆಯಾದಾಗ ವಿವಿಧ ಕಡೆ ಚದುರಿ ಗೋವಾ, ಹರ್ಯಾಣ ದಕ್ಷಿಣ ಭಾರತದಲ್ಲಿ ನೆಲೆಸಿದ ಸಮುದಾಯ ಸಾರಸ್ವತ ಬ್ರಾಹ್ಮಣ ಸಮುದಾಯವೆಂದು ಕರೆಸಿ ಕೊಂಡಿದೆ.

ಈ ಸಮುದಾಯ ಮಂಗಳೂರಿನಲ್ಲಿಯೂ ಬಂದು ನೆಲೆಸಿ ಸಾರಸ್ವತ ಸಮುದಾಯದ ಮೂಲಕ ಹಲವು ಕೊಡುಗೆಗಳನ್ನು ನೀಡಿ ತಮ್ಮ ಗುರುತನ್ನು ಉಳಿಸಿಕೊಂಡಿದೆ. ಇಂತಹ ಸಮುದಾಯದ ಕೊಡುಗೆಯ ಬಗ್ಗೆ ಇಂದಿನ ತಲೆ ಮಾರಿಗೆ ತಿಳಿಸುವ ದೃಷ್ಟಿಯಿಂದ ಸಾರಸ್ವತ ಬ್ರಾಹ್ಮಣ ಇತಿಹಾಸ ಛಾಯಾಚಿತ್ರ ಪ್ರದರ್ಶನ ಮುಖ್ಯವಾಗುತ್ತದೆ ಎಂದು ಡಾ. ಕಸ್ತೂರಿ ಮೊಹನ್ ಪೈ ತಿಳಿಸಿದ್ದಾರೆ.

ಕಪ್ಪು ಬಿಳುಪು ಛಾಯಚಿತ್ರಗಳು

ಮಂಗಳೂರಿನ ಐತಿಹಾಸಿಕ ದಾಖಲೆಗಳು ಆಗಿರುವ ಸಾರಸ್ವತ ಬ್ರಾಹ್ಮಣರ ಆಗಮನದ ಕಾಲದಿಂದ ಹಿಡಿದು ಸ್ವಾತಂತ್ರ ನಂತರ ಹಾಗೂ ಇಂದಿನ ವರಗೆ ಬೆಳೆದು ಬಂದ ಚಾರಿತ್ರಿಕ ದಾಖಲೆಗಳನ್ನೊಗೊಂಡ ಛಾಯಚಿತ್ರ ಪ್ರದರ್ಶನ ಇದರಲ್ಲಿ ಒಳಗೊಂಡಿದೆ.

ಸಾರಸ್ವತ ಸಮುದಾಯದಿಂದ ಸ್ಥಾಪನೆಗೊಂಡ ಗಣಪತಿ ಹೈಸ್ಕೂಲ್, ಕೆನರಾ ಬ್ಯಾಂಕ್, ಸೆಂಟ್ರಲ್, ರೂಪವಾಣಿ, ರಾಮಕಾಂತಿ ಚಿತ್ರ ಮಂದಿರ, ತಾಜ್ ಮಹಲ್ ರೆಸ್ಟೋರೆಂಟ್, ಶ್ರೀ ವೆಂಕಟರಮಣ ದೇವಸ್ಥಾನ, ಕುಡ್ತೇರಿ ಶ್ರೀ ಮಹಾಮಾಯ ದೇವಸ್ಥಾನ ಸೇರಿಂದಂತೆ ಹಳೆ ಮಂಗಳೂರಿನ ವಿವಿಧ ಕ್ಷೇತ್ರಗಳ ಅಪರೂಪದ ಛಾಯಾಚಿತ್ರಗಳನ್ನು ಈ ಚಿತ್ರ ಪ್ರದರ್ಶನ ಹೊಂದಿದೆ.

ಛಾಯಾಚಿತ್ರ ಪ್ರದರ್ಶನ ಇಂದಿನಿಂದ ನ. 30ರವರೆಗೆ ಕೊಡಿಯಾಲ್ ಗುತ್ತು ನಿವಾಸದಲ್ಲಿ ನಡೆಯಲಿದೆ. ಶನಿವಾರ ಮತ್ತು ರವಿವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 7.30ರವರೆಗೆ ,ಉಳಿದ ದಿನಗಳಲ್ಲಿ ಸಂಜೆ 5.30ರಿಂದ ರಾತ್ರಿ 7.30ರವರೆಗೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ ನ ಸಂಚಾಲಕ ಸುಭಾಸ್ ಬಸು, ಅಜೀಂ ಪ್ರೇಮ್‌ಜಿ ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿ ದೀಕ್ಷಿತ್ ಪೈ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)