varthabharthi


ಸಿನಿಮಾ

ಯೋಗರಾಜ್ ಹಾರಿಸಲಿದ್ದಾರೆ ಗಾಳಿಪಟ 2

ವಾರ್ತಾ ಭಾರತಿ : 1 Dec, 2019

ಮುಂಗಾರು ಮಳೆ ಹಾಗೂ ಗಾಳಿಪಟ ಯೋಗರಾಜ್‌ಭಟ್‌ಗೆ ಭಾರೀ ಹೆಸರು ತಂದುಕೊಟ್ಟ ಚಿತ್ರಗಳು. ಇದೀಗ ಗಾಳಿಪಟ ಚಿತ್ರದ ಸಿಕ್ವೇಲ್ ನಿರ್ಮಿಸಲು ಯೋಗರಾಜ್ ಭಟ್ ರೆಡಿಯಾಗುತ್ತಿದ್ದಾರೆ. ಆದರೆ ‘ಗಾಳಿಪಟ 2’ ಚಿತ್ರದ ನಿರ್ಮಾಪಕರು ಮಾತ್ರ ಬದಲಾಗಿದ್ದಾರೆ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಉಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಉಪ್ಪುಹುಳಿ ಖಾರ, ನಾತಿಚರಾಮಿ,ಪಡ್ಡೆಹುಲಿ ಹಾಗೂ ರಮೇಶ್ ಅರವಿಂದ್ ಅವರ 100 ಚಿತ್ರವನ್ನು ಉಮೇಶ್ ರೆಡ್ಡಿ ನಿರ್ಮಿಸಿದ್ದಾರೆ.

ಗಾಳಿಪಟ ಚಿತ್ರದ ನಾಯಕ ಗಣೇಶ್, ಈ ಚಿತ್ರದಲ್ಲೂ ಹೀರೋ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಯೋಗರಾಜ್‌ಭಟ್-ಗಣೇಶ್ ಕಾಂಬಿನೇಶನ್‌ನ ನಾಲ್ಕನೆ ಚಿತ್ರ ಇದಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಮುಂಗಾರುಮಳೆ, ಗಾಳಿಪಟ, ಮುಗುಳುನಗೆ ಚಿತ್ರಗಳಲ್ಲಿ ಗಣೇಶ್ ನಾಯಕನಾಗಿ ನಟಿಸಿದ್ದರು. ರೋಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಈ ಚಿತ್ರದಲ್ಲಿ ದಿಗಂತ್, ಅನಂತನಾಗ್ ಕೂಡಾ ಅಭಿನಯಿಸಲಿದ್ದಾರೆ. ಯೋಗರಾಜ್ ಭಟ್ ಚಿತ್ರಗಳಲ್ಲಿ ಸಹನಿರ್ದೇಶಕರಾಗಿದ್ದ ಪವನ್ ಗಾಳಿಪಟ 2 ಮೂಲಕ ನಟನಾಗಲಿದ್ದಾರೆ. ವೈಭವಿಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ಹಾಗೂ ಸಂಯುಕ್ತ ವರ್ಮಾ ಚಿತ್ರದ ನಾಯಕಿಯರಾಗಿ ಮಿಂಚಲಿದ್ದಾರೆ. ನಿಶ್ಮಿಕಾ ನಾಯ್ಡು ಕೂಡಾ ಇನ್ನೊಂದು ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕುದುರೆಮುಖದಲ್ಲಿ ಆರಂಭಗೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)