ಮಂಗಳೂರು, ಡಿ.1: ಬಜಾಲ್ ಫೈಸಲ್ ನಗರದ ದಿ. ಜಿ ಹಮೀದ್ ಅವರ ಪತ್ನಿ ನಫೀಸಾ (64) ಅವರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ಅಪರಾಹ್ನ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ‘ವಾರ್ತಾಭಾರತಿ’ಯ ಛಾಯಾಗ್ರಾಹಕ ಸುಹೈಲ್ ಬಜಾಲ್ ಸಹಿತ ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.