varthabharthi


ಗಲ್ಫ್ ಸುದ್ದಿ

ಕೆಸಿಎಫ್ ಸೌತ್ ಸೆಕ್ಟರ್ ದಮ್ಮಾಮ್ ವತಿಯಿಂದ ಪ್ರತಿಭೋತ್ಸವ, ಸ್ನೇಹ ಸಂಗಮ

ವಾರ್ತಾ ಭಾರತಿ : 2 Dec, 2019

ದಮ್ಮಾಮ್, ಡಿ.2: ಕೆಸಿಎಫ್ ಸೌತ್ ಸೆಕ್ಟರ್ ದಮಾಮ್ ವತಿಯಿಂದ ಪ್ರತಿಭೋತ್ಸವ ಹಾಗೂ ಸ್ನೇಹ ಸಂಗಮ ಅಲ್ ಕುರೈದ ಇಸ್ತಿರಾ ಸೈಹಾತ್ ನಲ್ಲಿ  ನ.28ರಂದು ನಡೆಯಿತು.

ಇದರ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ  ಅಲ್ ಮದ್ಲೂಹ್ ಕ್ಲಿನಿಕ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿತ್ತು. ಡಾ.ಅಬುಲೇಸ್ ಖಾನ್  ಆರೋಗ್ಯ ಕುರಿತಾದ ಸಲಹೆ ಸೂಚನೆಗಳನ್ನು ನೀಡಿದರು.

ಪ್ರತಿಭೋತ್ಸವದಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದವು. ಟೊಯೋಟಾ ಯುನಿಟ್ , ಅನಕ್ ಯುನಿಟ್, ಮುಬಾರಕಿಯ ಹಾಗೂ ಫೈಸಲಿಯ ಯುನಿಟ್ ಚಾಂಪಿಯನ್ ಆಗಿ ಅನಕ್ ಯೂನಿಟ್ ತಂಡ  ಹಾಗೂ ರನ್ನರ್ಸ್ ಆಗಿ ಟೊಯೋಟಾ ಯುನಿಟ್ ತಂಡ ಹೊರಹೊಮ್ಮಿತು.

ಸಮಾರೋಪ ಸಮಾರಂಭವು ಕೆಸಿಎಫ್ ಸೌತ್ ಸೆಕ್ಟರ್ ಅಧ್ಯಕ್ಷ ಮುಹಮ್ಮದ್ ಸಖಾಫಿ ತಲಕ್ಕಿ ಅಧ್ಯಕ್ಷತೆಯಲ್ಲಿ ನಡೆಯಿತು. ಅಶ್ರಫ್ ನಾವುಂದ ಸ್ವಾಗತಿಸಿದರು. ಪಿ.ಸಿ.ಅಬೂಬಕರ್ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು.

ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ಮುಖ್ಯ ಸಂದೇಶ ಭಾಷಣದಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಜೀವನ ಹಾಗೂ ಸ್ವಹಾಬತ್ ಕಿರಾಂ(ರ.ಅ.) ಪ್ರವಾದಿವರ್ಯನ್ನು ಪ್ರೀತಿಸಿದ ಉದಾತ್ತ ಮಾದರಿ ಬಗ್ಗೆ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಕೆಸಿಎಫ್ ಐಎನ್ ಸಿ ಸಾಂತ್ವನ ವಿಭಾಗದ ಅಧ್ಯಕ್ಷ ಅಬೂಬಕರ್ ರೈಸ್ಕೋ ಪಡುಬಿದ್ರೆ, ಐಸಿಎಫ್ ದಮ್ಮಾಮ್ ಸೆಂಟ್ರಲ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ತನ್ನಲೆ, ಐಸಿಎಫ್ ಸೈಹಾತ್ ದಾಯಿ ಝಯಿನುದ್ದೀನ್ ಅಹ್ಸನಿ, ಐಸಿಎಫ್ ಈಸ್ಟರ್ನ್ ಪ್ರಾವಿನ್ಸ್ ಮದ್ರಸ ರೇಂಜ್ ಕಾರ್ಯದರ್ಶಿ ಹಸೈನಾರ್ ಮೌಲವಿ, ಕೆಸಿಎಫ್ ಝೋನ್ ನಾಯಕರಾದ ಫೈಝಲ್ ಕೃಷ್ಣಾಪುರ, ನೌಶಾದ್ ತಲಪಾಡಿ, ಇಕ್ಬಾಲ್ ಮಲ್ಲೂರ್, ಬಾಷಾ ಗಂಗಾವಳಿ, ತಮೀಮ್ ಕೂಳೂರ್, ಕೆಸಿಎಫ್ ದಮ್ಮಾಮ್ ನಾರ್ತ್ ಸೆಕ್ಟರ್ ಅಧ್ಯಕ್ಷ ಶಿಹಾಬ್ ಹಿಮಿಮಿ ಸಖಾಫಿ ಭಾಗವಹಿಸಿದ್ದರು.

ನಂತರ ವಿಜಯಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಅನಕ್ ಯುನಿಟ್ ಕಾರ್ಯಕರ್ತರಾದ ಶಾಫಿ ಕೈಕಂಬರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)