varthabharthi


ರಾಷ್ಟ್ರೀಯ

ನಮ್ಮ ಸರಕಾರವೇ ಅಧಿಕಾರದಲ್ಲಿದ್ದಾಗ ಸಮಸ್ಯೆಗಳ ಬಗ್ಗೆ ಮಾತನಾಡಲು ಅಸಾಧ್ಯವಾಗಿತ್ತು: ಸುಮಿತ್ರಾ ಮಹಾಜನ್

ವಾರ್ತಾ ಭಾರತಿ : 2 Dec, 2019

ಭೋಪಾಲ್: ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರ ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿದ್ದಾಗ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವಂತೆ ತಾನು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡುತ್ತಿದ್ದೆ ಎಂದು ಮಾಜಿ ಲೋಕಸಭಾ ಸ್ಪೀಕರ್ ಮತ್ತು ಬಿಜೆಪಿ ನಾಯಕಿ ಸುಮಿತ್ರಾ ಮಹಾಜನ್ ಹೇಳಿದ್ದಾರೆ.

"ನನ್ನ ಸರಕಾರ ಅಧಿಕಾರದಲ್ಲಿದ್ದರೆ, ನನಗೆ ಅವರ ವಿರುದ್ಧ ಮಾತನಾಡಲು ಸಾಧ್ಯವಿಲ್ಲ. ಆದರೆ ಇಂದೋರ್ ನ ಜನರ ಹಿತಕ್ಕಾಗಿ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಬೇಕು ಎಂದು ನನಗನಿಸಿತ್ತು. ನಾನು ಧ್ವನಿಯೆತ್ತುವಂತೆ ಕಾಂಗ್ರೆಸ್ ನಾಯಕರಾದ ಜೀತು ಪಟ್ವಾರಿ ಮತ್ತು ತುಳಸಿ ಸಿಲಾವಟ್ ರ ಬಳಿ ಮನವಿ ಮಾಡುತ್ತಿದ್ದೆ" ಎಂದವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)