varthabharthi


ನಿಧನ

ಕಲ್ಯಾಣಿ ಆರ್. ಪೂಜಾರಿ

ವಾರ್ತಾ ಭಾರತಿ : 2 Dec, 2019

ಮುಂಬೈ, ಡಿ.2: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ. ರಾಜಶೇಖರ್ ಆರ್. ಕೋಟ್ಯಾನ್ ಇವರ ತಾಯಿ ಸಾಂತೂರು ಗರಡಿಮನೆ ಕಲ್ಯಾಣಿ ಆರ್.ಪೂಜಾರಿ (78) ಸೋಮವಾರ ಇಲ್ಲಿ ನಿಧನರಾದರು.

ಮೂಲತ: ಉಡುಪಿ ಜಿಲ್ಲೆಯ ಮುದರಂಗಡಿ ಸಾಂತೂರು ಕೊಡಂಗಲ ಗರಡಿ ಮನೆತನದವರಾಗಿರುವ ಕಲ್ಯಾಣಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ನಾಳೆ ಡಿ.3ರಂದು ಬೆಳಗ್ಗೆ 10 ಗಂಟೆಗೆ ಸ್ವಗೃಹದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)