ಪ್ರತಿಷ್ಠಿತ ಕಂಪೆನಿ ಹೆಸರಿನಲ್ಲಿ ನಕಲಿ ವಸ್ತುಗಳ ಮಾರಾಟ: ಆರೋಪಿ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.5: ಪ್ರತಿಷ್ಠಿತ ಕಂಪೆನಿ ಹೆಸರಿನ ನಕಲಿ ಉತ್ಪನ್ನಗಳನ್ನು ಸಂಗ್ರಹ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಜೆಪಿ ನಗರದ ಆಕ್ವಾ ವಾಟರ್ ಪ್ಯೂರಿಫೈಯರ್ಸ್ ಸಂಸ್ಥೆ ಮಾಲಕ ಮುನಿರಾಜು ಬಂಧಿತ ಆರೋಪಿ. ಈತ ಜೆಪಿ ನಗರದ ಮನೆಯೊಂದರಲ್ಲಿ ಕೆಂಟ್ ಆರ್ಓ ಹೆಸರಿನ ನಕಲಿ ಉತ್ಪನ್ನಗಳನ್ನು ಸಂಗ್ರಹ ಮತ್ತು ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಿ ಬಂಧಿಸಲಾಗಿದೆ.
ಆರೋಪಿ ನಡೆಸುತ್ತಿದ್ದ ಸಂಸ್ಥೆಯ ಸಿಬ್ಬಂದಿ ಸಾಮಾನ್ಯ ಫಿಲ್ಟರ್ಗಳು, ಮೆಂಬ್ರೇನ್ಗಳು ಮತ್ತು ಇತರೆ ಪ್ಯೂರಿಫೈಯರ್ ಬಿಡಿಭಾಗಗಳ ಮೇಲೆ ಕೆಂಟ್ ಸ್ಟಿಕ್ಕರ್ಗಳನ್ನು ಹಾಕಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಕೆಂಟ್ ಹೆಸರಿನ ಸ್ಟಿಕ್ಕರ್ಗಳನ್ನು ಮತ್ತು ಕೆಂಟ್ ಲೋಗೋಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಯಲ್ಲಿ ಆರೋಪಿ ಮುನಿರಾಜು ಕೆಂಟ್ ಹೆಸರಿನಲ್ಲಿ ಸ್ಪೇರ್ಪಾರ್ಟ್ಕಿಟ್, ಸೆಂಡಿಮೆಂಟ್ ಫಿಲ್ಟರ್, ಪೋಸ್ಟ್ ಕಾರ್ಬನ್ ಫಿಲ್ಟರ್ ಸೇರಿದಂತೆ ಇನ್ನಿತರ ಬಿಡಿಭಾಗಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.